Home Local ಹೊನ್ನಾವರದಲ್ಲಿ ನಾಳೆ “ರಾಮಪದ”

ಹೊನ್ನಾವರದಲ್ಲಿ ನಾಳೆ “ರಾಮಪದ”

SHARE

ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪ್ರತೀ ಏಕಾದಶಿಯ ದಿನದಂದು ನಡೆಸಿಕೊಡುವ ರಾಮಪದ ಕಾರ್ಯಕ್ರಮ ದಿನಾಂಕ ೨೦.೦೬.೨೦೧೭ ಮಂಗಳವಾರ ಹೊನ್ನಾವರದ ಹವ್ಯಕ ಸಭಾಭವನದಲ್ಲಿ ಸಂಯೋಜನೆಗೊಂಡಿದೆ.

ರಾಮನ ಕುರಿತಾದ ಭಕ್ತಿಗೀತೆಗಳು, ಕಥನ ,ವಾಚನ, ರಾಮಧ್ಯಾನ ಇತ್ಯಾದಿ ಕಾರ್ಯಕ್ರಮಗಳು ಏಕ ವೇದಿಕೆಯಲ್ಲಿ ನಡೆಯಲಿದೆ. ಶ್ರೀ ಮಠದ ಕಲಾರಾಮ ವಿಭಾಗದ ಸಂಯೋಜನೆಯಲ್ಲಿ ನಿರಂತರವಾಗಿ ಪ್ರತೀ ಏಕಾದಶಿಗೆ ಈ ಕಾರ್ಯಕ್ರಮ ಸಂಯೋಜನೆಗೊಳ್ಳುತ್ತಿರುವುದು ವಿಶೇಷ.