Home Important ಅಭಿನಯ ಶಾರದೆ ಆರೋಗ್ಯದಲ್ಲಿ ಚೇತರಿಕೆ – ಗಣ್ಯರ ವದಂತಿ ಟ್ವೀಟ್​ಗೆ ಪುತ್ರ ಕಿಡಿ.

ಅಭಿನಯ ಶಾರದೆ ಆರೋಗ್ಯದಲ್ಲಿ ಚೇತರಿಕೆ – ಗಣ್ಯರ ವದಂತಿ ಟ್ವೀಟ್​ಗೆ ಪುತ್ರ ಕಿಡಿ.

SHARE

ಬೆಂಗಳೂರು: ಅಭಿನಯ ಶಾರದೆ ಜಯಂತಿಗೆ ಮೂರನೇ ದಿನವೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಂತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ನಿನ್ನೆ ತಮ್ಮ ಮಗನ ಜೊತೆ ಕೈ ಸನ್ನೆ ಮಾಡಿ ಮಾತನಾಡಿದ್ದಾರೆ. ಆದರೆ, ಈ ಮಧ್ಯೆ ನಿನ್ನೆ ಸಂಜೆ ಸಾಮಾಜಿಕ ಜಾಲಾತಾಗಳಲ್ಲಿ ಜಯಂತಿ ಇನ್ನಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಅದರಲ್ಲೂ ಬಿಜೆಪಿ ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿ ಜಯಂತಿಗೆ ಶ್ರದ್ಧಾಂಜಲಿ ಅರ್ಪಿಸಿದ್ದರು.

ಕೆಲವು ರಾಷ್ಟ್ರೀಯ ಮಾಧ್ಯಮಗಳು ಕೂಡ ಜಯಂತಿ ಇನ್ನಿಲ್ಲ ಎಂದು ಸುದ್ದಿ ಮಾಡಿದ್ದವು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಗೊಂದಲದಲ್ಲಿದ್ದರು. ನಂತರ ಮಾಧ್ಯಮಗಳಿಗಳೊಂದಿಗೆ ಮಾತನಾಡಿದ ಮಗ ಕೃಷ್ಣಕುಮಾರ್​ ತಾಯಿ ಆರೋಗ್ಯದಿಂದಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿಯನ್ನು ಹರಡಬೇಡಿ ಅಂತ ಮನವಿಯನ್ನು ಮಾಡಿಕೊಂಡರು.

ಸುಮಲತ ಟ್ವಿಟ್ ಕೋಪಗೊಂಡ ಜಯಂತಿ ಪುತ್ರ
ನಟಿ ಸುಮಲತಾ ಕೂಡ ಜಯಂತಿ ಅವರ ಫೋಟೋ ಹಾಕಿ RIP ಎಂದು ಬರೆದು, ಇದು ಹೃದಯಾಘಾತ ಆಗುವಂತ ವಿಚಾರ. ಅಂತ್ಯತ ಶ್ರೇಷ್ಠ ನಟಿ ಜಯಂತಿ ಅವರು ಅವರ ಜೊತೆ ಸಾಕಷ್ಟು ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕೋಪಗೊಂಡ ಜಯಂತಿ ಪುತ್ರ ಸುಖಾ ಸುಮ್ಮನೇ ಚಿತ್ರರಂಗದಲ್ಲಿ ಇದ್ದುಕೊಂಡು ಹೀಗೆ ಮಾಡುವುದು ಸರಿಯಲ್ಲ. ಅಂಬರೀಶ್ ಅವರಿಗೆ ಅನಾರೋಗ್ಯ ಇದ್ದಾಗ ನಾವೆಲ್ಲ ಹೇಗೆ ನಡೆದುಕೊಂಡಿದ್ದೆವಾ? ಅನುಮಾನ ಇದ್ದಿದ್ರೆ ನನಗೆ ಕರೆ ಮಾಡಿ ಕೇಳಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.