Home Important ಕಿರಿಯರ ವಿಶ್ವಕಪ್‍ನಲ್ಲಿ ಭಾರತದ ಶೂಟರ್ ಮುಸ್ಕಾನ್ ಬಾನ್‍ವಾಲಾಗೆ ಚಿನ್ನದ ಪದಕ.

ಕಿರಿಯರ ವಿಶ್ವಕಪ್‍ನಲ್ಲಿ ಭಾರತದ ಶೂಟರ್ ಮುಸ್ಕಾನ್ ಬಾನ್‍ವಾಲಾಗೆ ಚಿನ್ನದ ಪದಕ.

SHARE

ಸಿಡ್ನಿ, – ಕಿರಿಯರ ವಿಶ್ವಕಪ್‍ನಲ್ಲಿ ಭಾರತದ ಸ್ವರ್ಣಬೇಟೆ ಮುಂದುವರೆದಿದ್ದು, ಟೂರ್ನಿಯ ಅಂತಿಮ ದಿನದಂದು ಕೂಡ ಭಾರತದ ಶೂಟರ್ ಮುಸ್ಕಾನ್ ಬಾನ್‍ವಾಲಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಿರಿಯರ ವಿಶ್ವಕಪ್‍ ನಡೆದ ಮಹಿಳೆಯ ಪಿಸ್ತೂಲ್ ವಿಭಾಗದ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಮುಸ್ಕಾನ್ ಫೈನಲ್ಸ್‍ನಲ್ಲಿ 35 ಹಿಟ್ಸ್‍ಗಳನ್ನು ಯಶಸ್ವಿಗೊಳಿಸುವ ಮೂಲಕ ಅಗ್ರಸ್ಥಾನಿ ಯಾಗಿ ಸ್ವರ್ಣ ಪದಕವನ್ನು ತಮ್ಮದಾಗಿಸಿ ಕೊಂಡರು. ಚೀನಾದ ಕ್ವಿನ್ ಶಿಯಾಂಗ್ , ಥೈಯ್ಲಾಂಡ್‍ನ ಕ್ಯಾನಾಕ್ರೋನ್ ಹಿರುನ್‍ಪೋಯೆಮ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದು ನಗೆ ಚೆಲ್ಲಿದರು. ಮುಸ್ಕಾನ್ ಗಳಿಸಿದ ಚಿನ್ನದ ಪದಕದೊಂದಿಗೆ ಐಎಸ್‍ಎಸ್‍ಎಫ್ ಕಿರಿಯರ ವಿಶ್ವಕಪ್‍ನಲ್ಲಿ ಭಾರತ ತಂಡವು 4 ಸ್ವರ್ಣ ಮೆಡಲ್‍ಗಳನ್ನು ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.