Home Local ಹೊನ್ನಾವರದಲ್ಲಿ ರಾಮಪದ ಸಂಪನ್ನ

ಹೊನ್ನಾವರದಲ್ಲಿ ರಾಮಪದ ಸಂಪನ್ನ

SHARE

ಹೊನ್ನಾವರ: ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪ್ರತೀ ಏಕಾದಶಿಯಂದು ನಡೆಸುವ ರಾಮಪದ ಕಾರ್ಯಕ್ರಮ ಹೊನ್ನಾವರದ ಹವ್ಯಕ ಸಭಾಭವನದಲ್ಲಿ ಸಂಪನ್ನವಾಯಿತು.

ಶ್ರೀ ರಾಮನ ತತ್ವ ಹಾಗೂ ರಾಮನ ಕುರಿತಾದ ಅನೇಕಾನೇಕ ಕಥನಗಳನ್ನು ಇದೇ ಸಂದರ್ಭದಲ್ಲಿ ಶ್ರೀಗಳು ವಿವರಿಸಿದರು.

ರಾಮನೆಂದರೆ ಸತ್ಯ, ರಾಮನೆ ಸರ್ವಸ್ವ ಎಂಬುದಾಗಿ ವಿವರಿಸಿದರು. ರಾಮನ ವಿನಃ ಬೇರೆ ದೇವರು ಬೇಕೆ ಎಂದ ಶಂಕರರ ಶ್ಲೋಕಗಳನ್ನು ಅರ್ಥವತ್ತಾಗಿ ವಿವರಣೆ ನೀಡಿದರು.

ಸಾಧನೆಯ ಮಾರ್ಗಕ್ಕೆ ಒಬ್ಬರನ್ನು ಆಶ್ರಯಿಸಬೇಕು. ಸರ್ವಸ್ವವೂ ರಾಮನೇ ಆಗಬೇಕು ಎಂದ ಶ್ರೀಗಳು ಶ್ರೀ ಮಠದ ಕುರಿತಾದ ವಿವರ ನೀಡಿದರು.

ಸ್ಥಳೀಯ ಕಲಾವಿಧರು ಹಾಗೂ ಕಲಾರಾಮ ಬಳಗದ ಸದಸ್ಯರು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.