Home Important ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸದಿದ್ದರೆ ಹಿಂಸಾಚಾರದ ಹಾದಿ ಹಿಡಿಯಬೇಕಾಗುತ್ತದೆ : ಶಿವಸೇನಾ

ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸದಿದ್ದರೆ ಹಿಂಸಾಚಾರದ ಹಾದಿ ಹಿಡಿಯಬೇಕಾಗುತ್ತದೆ : ಶಿವಸೇನಾ

SHARE

ಬೆಳಗಾವಿ: ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸದಿದ್ದರೆ ಹಿಂಸಾಚಾರದ ಹಾದಿ ಹಿಡಿಯಬೇಕಾಗುತ್ತದೆ ಎಂದು ಶಿವಸೇನಾ ಮುಖಂಡ ಸಂಜಯ್ ರೌತ್ ಅವರು ಶುಕ್ರವಾರ ಬೆದರಿಕೆ ಹಾಕಿದ್ದಾರೆ.
ಕರ್ನಾಟಕ ಸರ್ಕಾರದ ಹಸ್ತಕ್ಷೇಪದಿಂದಾಗಿ ಬೆಳಗಾವಿ ಜನತೆಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಬೆಳಗಾವಿ ಮತ್ತು ಇತರೆ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡುವುದರಿಂದ ಗಡಿ ವಿವಾದವನ್ನು ಇತ್ಯರ್ಥಗೊಳಿಸಬಹುದು ಎಂದು ಶಿವಸೇನಾ ಮುಖಂಡ ಹೇಳಿದ್ದಾರೆ.

ಬೆಳಗಾವಿ ಜನರಿಗೆ ಅಥವಾ ಅಲ್ಲಿನ ಗಡಿ ಪ್ರದೇಶಕ್ಕೆ ಯಾವುದೇ ರೀತಿಯ ಅನ್ಯಾಯವಾದರೂ ಅದು ಇಡೀ ಮಹಾರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ. ಕಾಶ್ಮೀರ, ಕಾವೇರಿ, ಸಟ್ಲೇಜ್ ಅಥವಾ ಬೆಳಗಾವಿ ವಿವಾದಗಳು ಪ್ರಜಾಪ್ರಭುತ್ವದಿಂದ ಪರಿಹಾರವಾಗಿಲ್ಲ ಎಂದರೆ ನಾವು ಹಿಂಸೆಯ ಹಾದಿ ಹಿಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾಷೆಯ ಆಧಾರದ ಮೇಲೆ ಬೆಳಗಾವಿಯನ್ನು ಮಹಾರಾಷ್ಟ್ರದ ಭಾಗ ಎಂದು ಪರಿಗಣಿಸುವಂತೆ ಮಹಾರಾಷ್ಟ್ರದ ಜನ ಎಂದಿದನಿಂದಲೂ ಹೋರಾಟ ನಡೆಸುತ್ತಿದ್ದಾರೆ ಎಂದರು.