Home Article ಕಳೆದುಹೋದ ಎಳೆಯ ದಿನಗಳು (ಭಾಗ6)

ಕಳೆದುಹೋದ ಎಳೆಯ ದಿನಗಳು (ಭಾಗ6)

SHARE

ತಿಗಣೇಶ ಮಾಗೋಡು.

ಹಳೆಯ ದಿನಗಳಿಗೆ..ಮತ್ತೆ ಹೋಗಿ ಬರೋಣ..ತಿಗಣೇಶ ವಂದಿಸುತ್ತ… ಕರೆದೊಯ್ಯುವೆ..ನನ್ನೊಂದಿಗಿರಿ.

ಆಗೆಲ್ಲ ಸಮವಸ್ತ್ರ ಇಲ್ಲ..ನಾವು ಹಾಕಿದ್ದೇ ವಸ್ತ್ರ..ಆದರೆ ಮುಕ್ಕಾಲಕ್ಕಿಂತ ಹೆಚ್ಚು ಮಕ್ಕಳಿದು ಸಮವಸ್ತ್ರವಾಗಿತ್ತು..ಅದು ಹಿಂದಬದಿಗೆ..ನೋಡಿದಾಗ ಮಾತ್ತ್ರ..ಅಂದರೆ ಚಡ್ಡಿಗಳು ಹಿಂದೆ ಹರಿದಿರುತ್ತಿತ್ತು..ದೊಡ್ಡವರ ಮನೆ ಮಕ್ಕಳು ಆಗಾಗ ಹೊಸಬಟ್ಟೆ ಹಾಕಿದಾಗ..ನಮಗೆಲ್ಲ..ಆ ಅಂಗಿಚಡ್ಡಿಗಳು ಕನಸಲ್ಲಿ ಬರುತ್ತಿತ್ತು..ಮನೆಗೆ ಬಂದು ಒಂದು ನಂಬ್ರವಾಗಿ..ಬೆನ್ನಮೇಲೆ ಐದು ಬೆಳ್ಳು ಅಚ್ಚು ಏಳುತ್ತಿತ್ತು..ಆಗ ಮಡಿ..ಮೈಲಿಗೆ ಬಹಳ.ನಾವು ಶಾಲೆಗೆ ಹೊರಡುವುದು..ಮನೆಯಿಂದಲ್ಲ.ಬಚ್ಚಲಮನೆಯಿಂದ..ಬಂದುಹೊಕ್ಕುವುದೂ ಬಚ್ಚಲಮನೆಗೇ..ಯಾಕೆಂದರೆ ಶಾಲೆ ಮೈಲಿಗೆ ತೆಗೆಯ ಬೇಕಿತ್ತು.

ನಮ್ಮ ಅಂಗಿ ಚೆಡ್ಡಿಗಳೆಲ್ಲ..ಹೊಗೆಕಂಪೇ..ಈಗಿನ ಮಕ್ಕಳ ಹಾಗಲ್ಲ.ನಾಚಿಕೆ ಸ್ವಲ್ಪ ಕಡಿಮೆಯೇ..ದುಂಡಗೆ ಓಡಾಡಿದ್ದೇ ಹೆಚ್ಚು..ಹದಿನೈದು ದಿನಕ್ಕೊಂದಸಲ..ನಮಗೆ ದೃಷ್ಟಿ ತೆಗೆಯುತ್ತಿದ್ದರು..ವಾರಕ್ಕೊಂದು ಸಲವಾದರೂ ಹಸೆಯಲ್ಲಿ ಉಚ್ಚಿಹೊಯ್ದ ನೆನಪಿದೆ..ಆಗ ಮಳ್ಳಿಕೇರಿ ಕೋಟನ ಗಣೇಶ ಹೆಗಡೆಮನೆಯಿಂದ ಕುಂಕುಮ..ಉಪ್ಪು ಮಂತ್ರಿಸಿ ತಂದು ಹಾಕಿದರೆ..ಉಚ್ಚಿ ಬಂದ್
ಮಳೆಗಾಲ ಬಂದರೆ ಶಾಲೆಗೆ ಕೊಪ್ಪೆ ಸೂಡಿಕೊಂಡು ಹೋಗೋದು..ಗೌಡ್ರಕೇರಿ..ಹಸ್ಲಕೇರಿ ಮಕ್ಕಳು..ಸಣ್ಣ ಗುರುಬು..ಸೂಡಿಕೊಂಡು ಬರುತ್ತಿದ್ದರು..ಇನ್ನು..ಮರಸಣ್ಗೆ ಎಲೆಯಲ್ಲಿಯೇ..ಶಾಲೆ ಮುಗಿಸಿದವರೂ ಇದ್ದಾರೆ..ಮಳೆಗಾಲ ಐದು ತಿಂಗಳು ಮನೆಗೆ ಬರೆಯಲು ಕೊಡುತ್ತಿರಲಿಲ್ಲ.

ಮಳೆಯಲ್ಲಿ ಅಳಚುವ ನೆವಮಾಡಿ..ಬರೆಯದೇ ಪಾಟಿ ಒದ್ದೆ ಮಾಡಿ ತೋರಿಸುವ ಕಳ್ಳರು ನಾವು.ಒಂದೊಂದು ಅಂಗಿಗೆ ನಾಲ್ಕು ಪಿನ್ನುಗಳು..ಹೆಣ್ಣು ಮಕ್ಕಳ ಸ್ಕರ್ಟಿಗೆ ಸೊಣಬೆಹುರಿ ಬಾರ..ಹಳೇ ಸೀರೆದಡಿಯ ರಿಬ್ಬನ್ನು..ಎಲ್ಲರ ತಲೆಯಲ್ಲೂ ಹೇನು..ಮೈಯಲ್ಲಿ ಕಜ್ಜಿ..ಕಾಲಿಗೆ..ಮುಳ್ಳು..ಇವೆಲ್ಲ ಕಾಯಮ್.ಮಾಸ್ತರ್ರು..ದಿನಾ ಶಾಲೆಗೆ ಬರುವುದು ಕಷ್ಟ..ನಾವು ಬಾಗಿಲು ತೆಗೆದು..ಸಂಜೆ ಬಾಗಿಲು ಹಾಕುವವರೆಗೆ..ಮಗ್ಗಿ ಬಳ್ಳಿಯದೇ..ಬಾಯಿಪಾಠ.ಗೌಜಿ ಹೊಡೆದವರ ಹೆಸರು ಬೋರ್ಡಿನ ಮೇಲೆ..ಅದರಲ್ಲಿ ನಮಗೆ ಆಗದವರ ಹೆಸರೇ ಹೆಚ್ಚು.ಬರೆಯುತ್ತಿದ್ದೆವು.ಹೆಚ್ಚಾಗಿ ನಮ್ಮ ಪೈಕಿ ಮಕ್ಕಳೇ ಮುಖ್ಯಮಂತ್ರಿಗಳು..ಹರಣಿಮಕ್ಕಿ ಮಕ್ಕಳೂ ಆಗಿದ್ದಿದೆ..ಯಾಕೆಂದರೆ..ಯಾರಾದರೂ ಬಂದರೆ ಅವರ ಮನೆ ಶೀಯಾಳ..ಅವರ ಮನೆ ಬಾವಿನೀರು..ಅದರ ಋಣಕ್ಕಾಗಿ… ಶಾಲೆಗೆಎರಡು ದಾರಿ..ಗೌಡರಕೇರಿ ದಾರಿ..ಚೆನ್ನೆಗುಂದದ ದಾರಿ..ಮೇಲಿನ ದಾರಿಯಲ್ಲಿ..ಸಂಕ..ದಣಪೆ ಜಾಸ್ತಿ..ಹಣ್ಣುಹಂಪಲು ನಮಗೆ ಕಾಯಮ್.ಕಲ್ಲುಸಿಗುವುದಿಲ್ಲ ಎಂದು ಪಾಟಿಚೀಲದಲ್ಲಿ ಕಲ್ಲುಹಾಕಿ ನಡೆಯುತ್ತಿದ್ದೆವು..ಮಾವಿನಮಿಡಿಯಿಂದ..ಹಣ್ಣು ಹೊಲಿಯುವವರೆಗೆ..ಒಬ್ಬೊಬ್ಬರೂ ಸಾವಿರ ಕಲ್ಲು ಹೊರುತ್ತಿದ್ದೆವು.

ಕೂಸಗೌಡನ ಮನೆ ಮರ..ಹರಣಿಮಕ್ಕಿ ಮರ..ಮಾಪಾರಿ ಮಾಸ್ತರಮನೆ ಮಾವಿನಮರ..ಇವೆಲ್ಲ ನಮ್ಮದೇ..ಮಾಪಾರಿ ಮಾಸ್ತ್ರ ಹೆಣ್ತಿ..ಕಲ್ಲು ಹೊಡೆದರೆ ಬಯ್ಯುತ್ತಿದ್ದರು..ಹಾಗಾಗಿ ಕದ್ದು ಹೊಡೆಯುವುದು..ಪೇರಲೆ ಮರ..ಹುಳಸಂಪಗೆ ಹಣ್ಣು..ಕರ್ಚೂಜಿ ಹಣ್ಣು..ಬಿಳಿಮುಳ್ಳೆ ಹಣ್ಣು..ಕುಸುಮಾಲೆ ಹಣ್ಣು..ಪೊಪ್ಪಳೆಹಣ್ಣು..ಹೀಗೆ ವರ್ಷಕಾಲಾವದಿ ಹಣ್ಣೇ..ಆಲೆಮನೆ ದಿನದಲ್ಲಿ..ಕೋಣನ ಬೆನ್ನಿಗೆ ಗಾಣದ ಸುತ್ತಲೂ ನೂರಾರು ಸುತ್ತು ತಿರುಗಿ..ಹಾಲು ಬೇಡಿ ಕುಡಿದಿದ್ದು ನೆನಪಿದೆ..ಎಲೆ ಅಡಿಕೆ ತಕೊಂಡು ಹೋಗಿ ಕಬ್ಬನಹಕ್ಲಿಗೆ ಹೋದರೆ..”ಮಾಣಿ ದಿನಾ ಬರಬೇಡಿ” ಎನಿಸಿಕೊಂಡು..ಕಬ್ಬು ತಿನ್ನುತ್ತಿದ್ದೆವು..ಬಾಲೆಕೀಳೆಯಲ್ಲಿ ಬಿಸಿಬೆಲ್ಲ ಹಾಕಿ..ಕಬ್ಬನಶಿಪ್ಪೆ ಅದ್ದಿ ಚೀಪಿ..ಅಂಗಿ ಅಂಟುಮಾಡಿಕೊಂಡು ಬರುತ್ತಿದ್ದೆವು..ಗಾಣಕ್ಕೆ ಕಬ್ಬುಕೊಡುವವ..ಕೋಣನ ಹೊಡೆವವ..ನಮಗೆ ಹೀರೋ.