Home Local ಸಿದ್ದಾಪುರ: ಚಿರತೆ ಮರಿಯ ಪ್ರಾಣ ಕಳೆಯಿತು ತಂತಿ ಬೇಲಿ!

ಸಿದ್ದಾಪುರ: ಚಿರತೆ ಮರಿಯ ಪ್ರಾಣ ಕಳೆಯಿತು ತಂತಿ ಬೇಲಿ!

SHARE

ಸಿದ್ದಾಪುರ: ತಾಲೂಕಿನ ಬಿಳಗಿ ಗ್ರಾಮದ ಕಲ್ಕಣಿಯಲ್ಲಿ ಮುಂಜಾನೆ ಚಿರತೆ ಮರಿ ಪ್ರತ್ಯಕ್ಷವಾಗಿದೆ. ಅರಣ್ಯ ಇಲಾಖೆ ಅಳವಡಿಸಿರುವ ತಂತಿಬೇಲಿ ಚಿರತೆ ಮರಿಯ ಸೊಂಟ ಸಿಕ್ಕಿ ಹಾಕಿಕೊಂಡಿದ್ದು, ತಪ್ಪಿಸಿಕೊಳ್ಳಲು ಆಗದೆ ನರಳಾಡಿ ಸಾವನ್ನಪ್ಪಿದೆ.

ರಕ್ಷಣಾ ಕಾರ್ಯಾಚರಣೆಗೆ ಶಿವಮೊಗ್ಗದಿಂದ ಬರಬೇಕಾಗಿದ್ದ ಅರವಳಿಕೆ ತಜ್ಞರು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಮೃತಪಟ್ಟಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು. ಹೇಗಾದರೂ ಮಾಡಿ ಆ ಚಿರತೆ ಮರಿಯನ್ನು ಪ್ರಾಣಾಪಾಯದಿಂದ ಕಾಪಾಡುವಂತೆ ಮನವಿ ಮಾಡಿದ್ರೂ ಪ್ರಾಣ ಉಳಿಯಲಿಲ್ಲ.

ಈ ಬಗ್ಗೆ ಸ್ಥಳೀಯ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದರೆ, ಅರಿವಳಿಕೆ ತಜ್ಞರು ಬಂದ ಮೇಲೆ ಅರಿವಳಿಕೆ ಚುಚ್ಚುಮದ್ದು ನೀಡಿ ಶಿವಮೊಗ್ಗಕ್ಕೆ ಚಿರತೆಯನ್ನು ರವಾನಿಸಲಾಗುವುದು ಎಂಬ ಭರವಸೆಯೂ ಚಿರತೆ ಮರಿಯ ಪ್ರಾಣ ಉಳಿಯಲಿಲ್ಲ. ಸ್ಥಳಕ್ಕೆ ಸ್ಥಳೀಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ರು.