Home Local ಸಿದ್ಧಗಂಗಾ ಶ್ರೀಗಳ ೧೧೧ನೇ ಜನ್ಮದಿನ: ೧೧೧ ಮಲೆನಾಡ ಗಿಡ್ಡ ಗೋವುಗಳನ್ನು ದತ್ತು ಪಡೆದ ರಾಘವೇಶ್ವರ ಶ್ರೀಗಳು

ಸಿದ್ಧಗಂಗಾ ಶ್ರೀಗಳ ೧೧೧ನೇ ಜನ್ಮದಿನ: ೧೧೧ ಮಲೆನಾಡ ಗಿಡ್ಡ ಗೋವುಗಳನ್ನು ದತ್ತು ಪಡೆದ ರಾಘವೇಶ್ವರ ಶ್ರೀಗಳು

SHARE

ಸಿದ್ದಾಪುರ:ಮಲೆನಾಡು ಗಿಡ್ಡ ತಳಿಯನ್ನು ದತ್ತು ಪಡೆದುಕೊಂಡು ಅದರ ಸಂವರ್ಧನೆಗೆ ವಿಶೇಷ ಕಾರ್ಯಯೋಜನೆ ರೂಪಿಸುತ್ತಿರುವ ರಾಮಚಂದ್ರಾಪುರ ಮಠ ಹಾಗೂ ರಾಘವೇಶ್ವರ ಶ್ರೀಗಳು ಸಿದ್ಧಗಂಗಾ ಶ್ರೀಗಳ ೧೧೧ನೇ ಜನ್ಮದಿನದ ಅಂಗವಾಗಿ ಮಲೆನಾಡು ಗಿಡ್ಡ ತಳಿಯ ೧೧೧ ಗೋವುಗಳನ್ನು ಸಿದ್ಧಗಂಗಾ ಶ್ರೀಗಳ‌ಹೆಸರಿನಲ್ಲಿ‌ ದತ್ತು ಪಡೆದರು.

ಸಂತಸ ಹಂಚಿಕೊಂಡ ಶ್ರೀ ಸಂಸ್ಥಾನ

ಸಿದ್ಧಗಂಗೆಯ ‘ನಡೆದಾಡುವ ದೇವರಿಗೆ’ ಇಂದು ನೂರಾಹನ್ನೊಂದು; ಅಪರೂಪದ ಮಲೆನಾಡು ಗಿಡ್ಡ ತಳಿಯ ನೂರಾಹನ್ನೊಂದು ಗೋವುಗಳನ್ನು ಅವರ ಹೆಸರಿನಲ್ಲಿ ದತ್ತು ಸ್ವೀಕರಿಸುತ್ತಿರುವೆವು.

ಅದು ಆ ಶತಾಧಿಕಾಯುಷಿ ಸಂತರ ಜನ್ಮದಿನವನ್ನು ನಾವು ಆಚರಿಸುವ ರೀತಿ!

ಹೀಗೆಂದು ಶ್ರೀಗಳು ಸಾಮಾಜಿಕ‌ಜಾಲತಾಣದ ಮೂಲಕ ಶಿಷ್ಯರ ಜೊತೆ ಈ ಸಂತಸ ಹಂಚಿಕೊಂಡರು.

ಹಿಂದಿನ‌ವರ್ಷವೂ ಕೊಡುಗೆ ನೀಡಲಾಗುತ್ತಿತ್ತು.

ಕಳೆದ‌ ವರುಷ ಈ ದಿನ ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಶ್ರೀಮಠದಿಂದ ನೂರಾ ಹತ್ತು ‌ಲೋಡ್ ಮೇವನ್ನು ಮಲೆಮಹದೇಶ್ವರ ಬೆಟ್ಟಕ್ಕೆ ಗೋಪ್ರಾಣಭಿಕ್ಷಾ ರೂಪದಲ್ಲಿ ನೀಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.