Home Local ಪಂದ್ಯಾವಳಿಗಳು ಸ್ಥಳೀಯ ಕ್ರೀಡಾ ಪಟುಗಳಿಗೆ ಸೂಕ್ತ ವೇದಿಕೆ- ನಾಗರಾಜ ನಾಯಕ ತೊರ್ಕೆ.

ಪಂದ್ಯಾವಳಿಗಳು ಸ್ಥಳೀಯ ಕ್ರೀಡಾ ಪಟುಗಳಿಗೆ ಸೂಕ್ತ ವೇದಿಕೆ- ನಾಗರಾಜ ನಾಯಕ ತೊರ್ಕೆ.

SHARE

ಶ್ರೀ ಮಹಾಸತಿ ಹಾಗೂ ಶ್ರೀ ಶಾಂತಿಕಾ ಪರಮೇಶ್ವರಿ ಗೆಳೆಯರ ಬಳಗ ಹೊಸಾಕುಳಿ ಇವರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಮತ್ತು ಡ್ಯಾನ್ಸ ಧಮಾಕಾ ಹಾಗೂ ಸನ್ಮಾನ ಸಮಾರಂಭವು ಹೊನ್ನಾವರದ ಹೊಸಾಕುಳಿಯ ಹಿ.ಪ್ರಾ.ಶಾಲೆಯ ಆವರಣದಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಬಿ.ಜೆ.ಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಅತ್ಯುತ್ತಮ ಸಂಘಟನೆಯೊಂದಿಗೆ ಅತ್ಯಂತ ಅಚ್ಚುಕಟ್ಟಾಗಿ ಈ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳುವುದರಿಂದ ಸ್ಥಳೀಯ ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಒದಗಿಸಿ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸಿದಂತಾಗುತ್ತದೆ. ಇವುಗಳ ಜೊತೆಗೆ ಅರ್ಹ ಸಾಧಕರನ್ನು ಸನ್ಮಾನಿಸಿರುವುದು ಈ ಸಮಾಜಕ್ಕೆ ಮಾದರಿ ಹಾಗೂ ಅತ್ಯುತ್ತಮ ಕೊಡುಗೆಯಾಗಿದೆ.

ಕ್ರೀಡಾಂಗಣವನ್ನು ಉದ್ಘಾಟಿಸಿದ ಬಿ.ಜೆ.ಪಿ ಮುಖಂಡರಾದ ಶ್ರೀ ವೆಂಕಟರಮಣ ಹೆಗಡೆಯವರು ಮಾತನಾಡಿ ತಂಡಗಳಿಗೆ ಶುಭಹಾರೈಸಿದರು.

ಇದೇ ವೇದಿಕೆಯಲ್ಲಿ ರಾಷ್ಟ್ರಪತಿ ಪುರಸ್ಕøತರಾದ ವಿದ್ವಾನ್ ಶ್ರೀ ಶಿವರಾಮ ಶಂಭು ಭಟ್ಟ ಅಲೇಖ ಹಾಗೂ ಹಿರಿಯ ಕ್ರೀಡಾಭಿಮಾನಿಗಳು ಹಾಗೂ ಶಿಕ್ಷಕರಾದ ಶ್ರೀ ವಿಶ್ವೇಶ್ವರ ಜಿ. ಹೆಗಡೆ ಚಿಟ್ಟಾಣ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಶಿವಾನಂದ ಹೆಗಡೆ, ಜಿ. ಪಂ ಸದಸ್ಯೆ ಶ್ರೀಮತಿ ಶ್ರೀಕಲಾ ಎಸ್. ಶಾಸ್ತ್ರಿ, ಜಿ.ಪಂ ಸದಸ್ಯೆ ಗಾಯತ್ರಿ ಗೌಡ, ಗ್ರಾ.ಪಂ ಸದಸ್ಯ ಕೃಷ್ಣ ಗೌಡ, ಮಾಜಿ ಜಿ.ಪಂ ಸದಸ್ಯ ಸುಬ್ರಹ್ಮಣ್ಯ ಎಸ್. ಶಾಸ್ತ್ರಿ, ಮಾಜಿ ಗ್ರಾ.ಪಂ ಅಧ್ಯಕ್ಷ ಬಾಲಚಂದ್ರ ಹೆಗಡೆ, ಮುಗ್ವಾ ಗ್ರಾ.ಪಂ ಸದಸ್ಯ ನಾಗೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಡ್ಯಾನ್ಸ ಧಮಾಕಾ ಕಾರ್ಯಕ್ರಮ ನಡೆಯಿತು.