Home Important ಮತಪಟ್ಟಿಗೆ ಸೇರದವರಿಗೆ ಫೈನಲ್‌ ಚಾನ್ಸ್‌!‘ಮಿಂಚಿನ ನೋಂದಣಿ’

ಮತಪಟ್ಟಿಗೆ ಸೇರದವರಿಗೆ ಫೈನಲ್‌ ಚಾನ್ಸ್‌!‘ಮಿಂಚಿನ ನೋಂದಣಿ’

SHARE

ಬೆಂಗಳೂರು: ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ಇನ್ನೂ ಮತಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳದವರಿಗೆ ಕೊನೆ ಅವಕಾಶ ನೀಡಲು ರಾಜ್ಯ ಚುನಾವಣೆ ಆಯೋಗ ನಿರ್ಧರಿಸಿದೆ.

18 ವರ್ಷ ತುಂಬಿರುವವರು ಮತ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಆಯೋಗ ‘ಮಿಂಚಿನ ನೋಂದಣಿ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಏಪ್ರಿಲ್‌ 8 ರಿಂದ ರಾಜ್ಯದ ಎಲ್ಲಾ ಮಟಗಟ್ಟೆಗಳಲ್ಲಿ ಈ ಮಿಂಚಿನ ನೋಂದಣಿ ನಡೆಲಿದೆ.

ಈ ಬಗ್ಗೆ ಇಂದು ಮಾಹಿತಿ ನೀಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್‌, ಮತಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ಅವಕಾಶ ನೀಡಿದ್ದು, ಎಲ್ಲಾ ಬೂತ್‌ಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಅರ್ಹ ನಾಗರಿಕರು ಹೆಸರು ನೋಂದಾಯಿಸಿಕೊಳ್ಳಲು ಇದೇ 14ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದರು.