Home Important ಕಾಸರಗೋಡು ಜಿಲ್ಲಾ ಮಟ್ಟದ ಯೋಗ ಕಾರ್ಯಕ್ರಮ.

ಕಾಸರಗೋಡು ಜಿಲ್ಲಾ ಮಟ್ಟದ ಯೋಗ ಕಾರ್ಯಕ್ರಮ.

SHARE

ಧರ್ಮತಡ್ಕ : ಜೂನ್ 21 2017 ರಂದು ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ವಿಶ್ವ ಯೋಗ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು . ಕಾಸರಗೋಡು ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕರಾದ ಶ್ರೀ ಇ . ಕೆ ಸುರೇಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮೆನೇಜರ್ ಶ್ರೀ ಯನ್ . ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಶ್ರೀ ದಿನೇಶ್ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ, ಡಾ। ಸೀತಾರತ್ನ , ಶ್ರೀ ಜಾನ್ ಡಿ ಸೋಜ,ದೈಹಿಕ ಶಿಕ್ಷಕರಾದ ಅಶೋಕನ್ ಶುಭಾಶಂಸನೆ ಗೈದರು.

ಯೋಗ ಗುರು ಕಾಸರಗೋಡು ಮೊಗ್ರಾಲ್ ಪುತ್ತೂರು ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಗೋಪಾಲ ಕೃಷ್ಣ ಭಟ್ ನೂರಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.
ಶ್ರೀ ಯನ್ ರಾಮಚಂದ್ರ ಭಟ್ ಪ್ರಾಂಶುಪಾಲರು ಸ್ವಾಗತಿಸಿ, ಧರ್ಮತಡ್ಕ ಯು.ಪಿ ಶಾಲಾ ಮುಖ್ಯೋಪಾಯರಾದ ಶ್ರೀ ಯನ್ ಮಹಾಲಿಂಗ ಭಟ್ ಧನ್ಯವಾದ ಸಮರ್ಪಿಸಿದರು, ಅಧ್ಯಾಪಕರಾದ ಸತೀಶ್ ಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವರದಿ:ಕೇಶವಪ್ರಸಾದ ಎಡಕ್ಕಾನ ಕಾಸರಗೋಡು