Home Article ಉಡುಗೊರೆ ಎಂಬ ನಂಟಿನ ಗಂಟು

ಉಡುಗೊರೆ ಎಂಬ ನಂಟಿನ ಗಂಟು

SHARE

ಉಡುಗರೆ…… ಅಹಾ ಕೇಳ್ದ್ರೇ ಎಷ್ಟು ಖುಷಿ ಆಗತ್ತೆ ಸಿಕ್ದ್ರೆ ಇನ್ನೆಷ್ಟು ಆಗಬಹುದುಅಲ್ವಾ…

ಹೌದು ಉಡುಗರೆಯೇ ಹಾಗೆ. ಅದು ಕೊಟ್ಟು ಹಾಗೂ ತೆಗೆದುಕೊಳ್ಳುವವರ ನಡುವಿನ ಸ್ನೇಹ ಅಥವಾ ಪ್ರೀತಿಯ ನಂಟಿನ ಗಂಟು.. ಈ ಉಡುಗರೆಯ ನಂಟು ಹೊಸತಾಗಿ ಬಂದದ್ದಲ್ಲ. ಯುಗಾಂತರಗಳಿಂದಲೂ ನೆಡೆದುಬಂದ ಸತ್ವಸಹಿತ ಸಂಪ್ರದಾಯವದು.
ಪ್ರಸಿದ್ದವಾದ ಘಟನೆಯೊಂದನ್ನ ಉಡುಗರೆಯ ಸಂಪ್ರದಾಯದಬಗ್ಗೆ ಅದರ ಮಹತ್ವದ ಬಗೆಗೆ ಉದಾಹರಣೆಯನ್ನಾಗಿ ನೀಡಬಯಸುತ್ತೇನೆ.
ದ್ವಾಪರದ ಅವತಾರೀ ಪುರುಷ ಶ್ರೀಕೃಷ್ಣ, ಅವನಿಗೊಬ್ಬ ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸುಧಾಮನೆಂಬ ವಯಸ್ಯ. ಸ್ನೇಹವೇ ಹಾಗೆ ಅದಕ್ಕೆ ಬಡವ ಸಿರಿವಂತನೆಂಬ ಭೇದವಿಲ್ಲ. ಹಾಗೆಯೇ ಬಾಲ್ಯದ ತುಂಟಾಟವಾಡುತ್ತ ಬೆಳೆದರು ಅವರು. ವರ್ತಮಾನ ಭೂತವಾಗುತ್ತ ಮುನ್ನಡೆಯಲು ಕೃಷ್ಣ ಯದುಕುಲದ ಯುವರಾಜನಾದ. ಸುಧಾಮನಾದರೋ ವಯಸ್ಸಲ್ಲಿ ದೊಡ್ಡವನಾಗಿದ್ದನಷ್ಟೇ ಹೊರತು ಸಿರಿತನ ಬೆಳೆಯಲಿಲ್ಲ
ಸುಧಾಮಗೆ ಗೆಳೆಯನ ನೋಡುವ ಆಸೆ. ಹಾಗೆಯೇ ಹೊರಟೇ ಬಿಟ್ಟ. ಪ್ರೀತಿಯ ಗೆಳೆಯನ ನೋಡಲು ಬರಿದಾದ ಕೈಲಿ ಹೋಗಬಾರದೆಂಬ ಆಚಾರ ತಿಳಿದವ ಆದರೆ ತೆಗೆದೊಯ್ಯಲು ಏನೂ ಇಲ್ಲ. ಕೊನೆಗೆ ಹೆಂಡತಿ ತಯಾರಿಸಿ ನೀಡಿದ “ಅವಲಕ್ಕಿ” ಯನ್ನೇ ಕೊಂಡೊಯ್ದ.
ಬಾಲ್ಯದ ಗೆಳೆಯ ಬಂದನೆಂದು ತಿಳಿದ ಮುಕುಂದ ಆದರದಿಂದ ಬರಮಾಡಿಕೊಂಡು ಅವನಿಗೆ ಯಥೋಚಿತ ಸತ್ಕಾರ ಮಾಡಿದ. ಸುಧಾಮಗೆ ತಾ ತಂದ ಉಡುಗರೆ ಕೊಡಲು ಮುಜುಗರ. ಆದರೆ ಕೃಷ್ಣಗೆ ಗೊತ್ತು ಇವ ಕಾಲಿ ಕೈಲಿ ಬರುವವನಲ್ಲ ಎಂದು. ಕೊನೆಗೂ ಉಡುಗರೆ ಕೊಡಲೇಬೇಕಾಯಿತು. ಕೊಟ್ಟ. ಅಹಾ!ಅಹಾ! ಎಂಬ ಉದ್ಗಾರ ಕೃಷ್ಣನದು. ಅಲ್ಲಿ ಕೊಟ್ಟ ವಸ್ತುಯಾವುದು, ಎಷ್ಟು ಎನ್ನುವುದಲ್ಲ ವಿಷಯ ಕೊಟ್ಟವನ ಪ್ರೀತಿ ಎಷ್ಟು ಎನ್ನುವುದೇ ಮುಖ್ಯವಾಗುವುದು.
ಹೀಗೆ ನಮ್ಮಲ್ಲಿ ಉಡುಗರೆ ಕೊಟ್ಟು ಅಥವಾ ತೆಗುದು ಕೊಳ್ಳುವುದು ಯುಗಾಂತರಗಳಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.
ನೆಂಟರಿಷ್ಟರ ಮನೆಗೆ ಹೋಗುವಾಗ, ಮದುವೆ ಮುಂಜಿಗಳಲ್ಲಿ, ಸ್ನೇನಿತರ ಭೇಟಿಗಳಲ್ಲಿ ಬರಿಗೈಲಿ ಹೋಗೋ ಜಾಯಮಾನವೇ ಅಲ್ಲ ನಮ್ಮದು.”ತಾಂಬೂಲ ವಸ್ತ್ರಾದಿನಾ ಸಂತೋಷ್ಯ” ಎಂದು ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಇತ್ತೀಚೆಗೆ ಬಹಳ ವೈಭವದಿಂದಲೇ ಮುಂದುವರಿಸಿದ್ದೇವೆ ನಾವು.
ಉಡುಗರೆ ನಮ್ಮ ಪ್ರೀತಿಯನ್ನು ತೋರುವಿಕೆಯ ಒಂದು ಮಾದ್ಯಮ ನಮಗೆ.
ಪ್ರೀತಿ ಅಂದಾಕ್ಷಣ ಉಡುಗರೆಯ ಮಹತ್ವ ಮರೆತರೂ ನೆನಪಾಗುತ್ತೆ. ಕಾರಣ ಇಂದು ಎಷ್ಟೋ ಪ್ರೇಮಿಗಳ ಪ್ರೀತಿ ನಿಂತಿರೋದೇ ನಮ್ಮೀ ಉಡುಗರೆ ಸಂಪ್ರದಾಯದಿಂದ. ಎಷ್ಟೋ ದಂಪತಿಗಳ “ರಿಧಮ್”ಇದು. ಜಗಳ ಶುರುಮಾಡೋ ಮಾದ್ಯಮವೂ ಇದೇ, ಮುಗಿಸೋ ಮಧ್ಯವರ್ತಿಯೂ ಇದೇ.
ಆದರೆ ಇತ್ತೀಚೆಗೆ ಯಾಕೋ ನಮ್ಮ ಎಲ್ಲ ಸಂಪ್ರದಾಯಗಳ ದುರ್ಬಳಕೆಯಾದಂತೆಯೇ ಉಡುಗರೆಯೂ ದುರ್ಬಳಕೆಯಾಗುತ್ತಿದೆಯೇನೋ ಎನ್ನುವ ಭಾವನೆ…
ಪ್ರೀತಿಯ ಪ್ರದರ್ಶನದ ಒಂದು ಮಾದ್ಯಮವಾದ ಇದು ಇಂದು ದೊಡ್ಡಸ್ಥಿಕೆಯ ದರ್ಪದ ದಾರಿಯಾಗುತ್ತಿದೆ. ಪ್ರದರ್ಶನ ಪ್ರಿಯರಿಗೆ ತಮ್ಮ “ಹಂ” ತೋರಿಸುವ ಪ್ರತಿಬಿಂಬಕವಾಗುತ್ತುದೆ.
ತಂದೆ,ತಾಯಿಯರ ವೈಕುಂಠ ಸಮಾರಾಧನೆಯಲ್ಲೂ “ಸವಿ ನೆನಪು”ಎಂದು
ಆಗಮಿಸಿದ ಬಾಂಧವರಿಗೆಲ್ಲ ಉಡುಗರೆ ಹಂಚುವ ಮೂರ್ಖರಿದ್ದಾರೆ.
ಆಶೀರ್ವಾದವೇ ಉಡುಗರೆ ಎನ್ನುವುದಕ್ಕಿಂತಲೂ “ಉಡುಗರೆಯೇ ಆಶೀರ್ವಾದ” ಎನ್ನುವವರ ಸಂಖ್ಯೆ ಹೆಚ್ಚಉತಿದೆಯೇನೋ ಎನ್ನುವ ಭಾವ ಭಯಗೊಳಿಸುತ್ತಿದೆ.
ಸಂಪ್ರದಾಯ ಎನ್ನುವುದು ನಿಂತ ನೀರಲ್ಲ ನಿಜ ಆದರೆ ಹೊಸ ಚಿಗುರು ಹಳೆಯ ಬೇರಿಂದಲೇ ಆದರೆ ಒಳಿತು. ಹಳೆಯ ಬೇರನ್ನು ಕಿತ್ತೊಗೆದು ಹೊಸ ಸೃಷ್ಠಿ ಸುಲಭವೂ ಅಲ್ಲ, ಸರಿಯೂ ಅಲ್ಲ.
ಉಡುಗರೆ_ಎನ್ನುವ_ಸಂಪ್ರದಾಯ_ಪ್ರೀತಿಯಬೆಸೆಯುವ _ಮಾದ್ಯಮವಾಗಲಿ. ಅದು ಪ್ರದರ್ಶನ ಪ್ರಿಯರ ಕೈಲಿ ಸಿಕ್ಕು ಒದ್ದಾಡುವುದು ಬೇಡ. ದೊಡ್ಡವರ ಸಣ್ಣತನವೂ ಆಗೋದು ಬೇಡವೆಂಬುದು ನನ್ನ ಆಶಯ.