Home Important ಎಪ್ರಿಲ್ 12ಕ್ಕೆ ಮತ್ತೆ ಕರ್ನಾಟಕ ಬಂದ್ ಆಗುತ್ತಾ? ಬಂದ್! ಬಂದ್!

ಎಪ್ರಿಲ್ 12ಕ್ಕೆ ಮತ್ತೆ ಕರ್ನಾಟಕ ಬಂದ್ ಆಗುತ್ತಾ? ಬಂದ್! ಬಂದ್!

SHARE

ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ತಮಿಳುನಾಡಿನಲ್ಲಿ ಭಾರಿ ಹೋರಾಟ ನಡೆಯುತ್ತಿರುವ ವೇಳೆಯಲ್ಲೇ ಮಂಡಳಿ ರಚನೆ ಮಾಡಬಾರದು ಎಂದು ಕನ್ನಡ ಚಳುವಳಿಯ ವಾಟಾಳ್‌ ನಾಗರಾಜ್‌ ಅವರು ಎಪ್ರಿಲ್‌ 12ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ.

ಅತ್ತಿಬೆಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್‌ ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ರಚಿಸಬಾರದು. ಇದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಕರ್ನಾಟಕ ಬಂದ್‌ ನಡೆಸುವುದಾಗಿ ಹೇಳಿದರು.

‘ತಮಿಳರು ಬಿರಿಯಾನಿ ತಿಂದು ಸತ್ಯಾಗ್ರಹ ಮಾಡುತ್ತಿದ್ದಾರೆ. ನಾವು ಹೋರಾಟಕ್ಕಿಳಿಯುವ ಯೋಚನೆಯಲ್ಲಿರಲಿಲ್ಲ. ತಮಿಳರೇ ನಮ್ಮನ್ನು ಹೋರಾಟಕ್ಕಿಳಿಯುವಂತೆ ಮಾಡಿದ್ದಾರೆ’ ಎಂದು ಕಿಡಿ ಕಾರಿದರು.