Home Local ಘೋಷಣೆಯಾಗಿಲ್ಲ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳು! ಜೆಡಿಎಸ್ ಅಭ್ಯರ್ಥಿ ಪ್ರದೀಪ್ ನಾಯ್ಕರಿಂದ ಜನರ ಮನ ಒಲಿಕೆಗೆ ನಡೆದಿದೆಯೇ...

ಘೋಷಣೆಯಾಗಿಲ್ಲ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳು! ಜೆಡಿಎಸ್ ಅಭ್ಯರ್ಥಿ ಪ್ರದೀಪ್ ನಾಯ್ಕರಿಂದ ಜನರ ಮನ ಒಲಿಕೆಗೆ ನಡೆದಿದೆಯೇ ಭಾರೀ ಕಸರತ್ತು?

SHARE

ಕುಮಟಾ ಹೊನ್ನಾವರ ಕ್ಷೇತ್ರದ ನೈಜ ಸ್ಥಿತಿ ಇದು .ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಇನ್ನೂ ನಡೆಯದೇ ಇರುವುದು ಜೆಡಿಎಸ್ ಗೆ ಪ್ಲಸ್ ಪಾಯಿಂಟ್ ಅಂತಾನೇ ಕುಮಟಾ ಭಾಗದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ದಂಡೇ ಇರುವುದರಿಂದ ಆಂತರಿಕ ಭಿನ್ನಾಭಿಪ್ರಾಯಗಳು ನಡೀತಾನೇ ಇವೆ .ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕಿ ಶಾರದಾ ಶೆಟ್ಟಿ ಅವರು ಪ್ರಚಾರ ಪ್ರಾರಂಭಿಸಿದ್ದಾರೆ ಆದರೆ ಕಾಂಗ್ರೆಸ್ ನಿಂದ ಅಧಿಕೃತವಾಗಿ ಇನ್ನೂ ಅಭ್ಯರ್ಥಿಯ ಘೋಷಣೆ ಆಗದೇ ಇರುವುದು ಹಲವು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ .

ಆದರೆ ಜೆಡಿಎಸ್ ನ ಪ್ರದೀಪ್ ನಾಯಕ್ ದೇವರಬಾವಿ ತಮ್ಮದೇ ಆದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ .ಚುನಾವಣೆ ಸಂಬಂಧ ಭಾರಿ ಸಿದ್ಧತೆಯಲ್ಲಿರುವ ಇವರು ಪ್ರತಿದಿನ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ಹಾಗೂ ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ .

ತಮ್ಮ ಕ್ಷೇತ್ರ ವ್ಯಾಪ್ತಿಯ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿರುವ ಯುವಕ ಸಂಘಗಳು ಹಾಗೂ ಇನ್ನಿತರ ಕಾರ್ಯಕರ್ತರನ್ನು ಭೇಟಿ ಮಾಡಿ ಜೆಡಿಎಸ್ ಪಕ್ಷ ಹಾಗೂ ತಮ್ಮನ್ನು ಬೆಂಬಲಿಸುವಂತೆ ಅವರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಪಕ್ಷದ ಪ್ರಣಾಳಿಕೆಗಳು ಹಾಗೂ ತಮ್ಮ ಕಲ್ಪನೆಗಳನ್ನು ಜನತೆಯೇ ಎದುರು ತೆರೆದಿಡುತ್ತಿರುವ ಇವರು ತಮ್ಮ ಸಾಮರ್ಥ್ಯ ಸ್ಥಾಪಿಸುವ ನಿಟ್ಟಿನಲ್ಲಿ ಲಘು ಬಗೆಯ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ .

ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿ ಅವರು ಸಹ ಕಾರ್ಯಾಚರಣೆಗೆ ಇಳಿಯುವ ದಿನಗಳು ಸಮೀಪಿಸುತ್ತಿದೆ. ಈ ಮಧ್ಯೆಯೇ ಜೆಡಿಎಸ್ ನ ಪ್ರದೀಪ್ ನಾಯಕ್ ತಮ್ಮ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಿ ಕೊಂಡಿದ್ದು ತಮ್ಮದೇ ಆದ ಸುಭದ್ರ ಕೋಟೆಯನ್ನು ನಿರ್ಮಿಸುವ ಕನಸು ಕಂಡಿದ್ದಾರೆ . ಆದರೆ ಜನತೆ ಯಾವ ನಿಟ್ಟಿನಲ್ಲಿ ಇವರನ್ನು ಬೆಂಬಲಿಸುತ್ತಾರೆ ಎಂಬುದು ಮಾತ್ರ ಕಾದು ನೋಡಬೇಕಾಗಿದೆ.