Home ವಾಣಿಜ್ಯ ಜಿಯೋ ಗೆ ಟಕ್ಕರ್ ಕೊಡುವಂತೆ ಬಿಎಸ್ಎನ್ಎಲ್ ಲೈವ್ IPL ಮ್ಯಾಚ್ ನೋಡಲು ಈ ಆಫರ್...

ಜಿಯೋ ಗೆ ಟಕ್ಕರ್ ಕೊಡುವಂತೆ ಬಿಎಸ್ಎನ್ಎಲ್ ಲೈವ್ IPL ಮ್ಯಾಚ್ ನೋಡಲು ಈ ಆಫರ್ ನೀಡಿದೆ!

SHARE

ಇತ್ತೀಚೆಗಷ್ಟೇ ಜಿಯೋದ IPL ಆಫರ್ ಗೆ ಟಕ್ಕರ್ ಕೊಡುವಂತೆ ಈಗ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಲೈವ್ IPL ಮ್ಯಾಚ್ ನೋಡಲು ಬಯಸುವವರಿಗೆ ಇದಕ್ಕಿಂತ ಒಳ್ಳೆ ಆಫರ್ ಮತ್ತೊಂದಿಲ್ಲ ಎಂದು ಬಿಎಸ್ಎನ್ಎಲ್ ತಿಳಿಸಿದೆ.

ಈ ಯೋಜನೆಯಂತೆ ರೂ. 248 ರೀಚಾರ್ಜ್ ಮಾಡಿದರೆ 51 ದಿನಗಳ ಅವಧಿಗೆ ಬರೋಬ್ಬರಿ 153 ಜಿಬಿ 4ಜಿ ಡೇಟಾ ಪಡೆಯಬಹುದು. ದಿನಕ್ಕೆ ನೀವು 3 ಜಿಬಿಯವರೆಗೂ ಡೇಟಾ ಬಳಕೆ ಮಾಡಬಹುದು. ಈ ಆಫರ್ ಏಪ್ರಿಲ್ 7ರಿಂದ ಏಪ್ರಿಲ್ 30ರ ತನಕ ಚಾಲನೆಯಲ್ಲಿರುತ್ತದೆ.

IPL ಪ್ರೀಯರಿಗೆ ಜಿಯೋ ಭರ್ಜರಿ ಆಫರ್!

ಅಲ್ಲಿ ಜಿಯೋ 251 ರೂ 102 ಜಿಬಿ ಆಫರ್ ಮಾಡಿದ್ರೆ ಬಿಎಸ್ಎನ್ಎಲ್ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಆಕರ್ಷಕ ಯೋಜನೆ ನೀಡುತ್ತಿದೆ.