Home Important ರುದ್ರ ಪಾರಾಯಣ ಹಾಗೂ ವೇದ ಸೂಕ್ತ

ರುದ್ರ ಪಾರಾಯಣ ಹಾಗೂ ವೇದ ಸೂಕ್ತ

SHARE

ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ರುದ್ರ ಪಾರಾಯಣ ಹಾಗೂ ವೇದ ಸೂಕ್ತ

ಸುಳ್ಯ ಹವ್ಯಕ ವಲಯ ವೈದಿಕ ವಿಭಾಗ ವತಿಯಿಂದ ಪ್ರದೋಷ ಕಾಲದ ರುದ್ರ ಪಾರಾಯಣ , ವೇದ ಸೂಕ್ತ ಹಾಗೂ ಶಿವ ಪಂಚಾಕ್ಷರಿ ಜಪವು 21-06-2017 ಬುಧವಾರ ದಂದು ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ನಡೆಯಿತು.

ವೈದಿಕ ರಾಗಿ ವೆಂಕಟೇಶ್ವರ ಶಾಸ್ತ್ರಿ ಅರಂಬೂರು, ಎತ್ತುಕಲ್ಲು ನಾರಾಯಣ ಭಟ್, ವಿಜಯಕೃಷ್ಣ ಪೆರಾಜೆ, ವಿಷ್ಣುಕಿರಣ ನೀರಬಿದಿರೆ, ಗೋಪಾಲಕೃಷ್ಣ ಭಟ್ ದುಗ್ಗಲಡ್ಕ, ಕೃಷ್ಣ ಶರ್ಮ ಪಿ, ವಿಷ್ಣು ಪ್ರಸನ್ನ ಪೆರಾಜೆ ಹಾಗು ಶ್ರೀವರ ಪಂಗ್ಗಣ್ಣಾಯ ರವರು ಸಹಕರಿಸಿದರು.

ಎತ್ತುಕಲ್ಲು ನಾರಾಯಣ ಭಟ್ ರವರು ಪ್ರದೋಷ ಕಾಲದ ರುದ್ರ ಪಾರಾಯಣದ ಬಗ್ಗೆ ಮಾಹಿತಿ ನೀಡಿದರು. ವಿಜಯ ಕೃಷ್ಣ ಪೆರಾಜೆಯವರು ಧನ್ಯವಾದ ಅರ್ಪಿಸಿದರು. ದೇವಸ್ಥಾನದ ಮುಖ್ಯ ಅರ್ಚಕರಾದ ವೆಂಕಟರಮಣ ಪಂಗ್ಗಣ್ಣಾಯರವರು ಉಪಸ್ಥಿತರಿದ್ದರು.

ವೈದಿಕರಾಗಿ ಸಹಕರಿಸಿದ ಎಲ್ಲರಿಗೂ ದೇವಸ್ಥಾನದ ವತಿಯಿಂದ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

✍ ಗೋಪಾಲಕೃಷ್ಣ ಭಟ್ ದುಗ್ಗಲಡ್ಕ