Home Local ಶ್ರೀ ಮಾತಾಜಿ ಬಸಮ್ಮ ತಾಯಿಯವರಿಗೆ ‘ಗೋಕರ್ಣ ಗೌರವ’

ಶ್ರೀ ಮಾತಾಜಿ ಬಸಮ್ಮ ತಾಯಿಯವರಿಗೆ ‘ಗೋಕರ್ಣ ಗೌರವ’

SHARE

ಗೋಕರ್ಣ:ಪ ಪೂ ಶ್ರೀ ಶ್ರೀ ಮಾತಾಜಿ ಬಸಮ್ಮ ತಾಯಿ , ಸಿದ್ಧಾರೂಢಮಠ , ಸೊಲ್ಲಾಪುರ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 456ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀಮತಿ ವೀಣಾ ಶ್ರೀಧರ ಷಡಕ್ಷರಿ ಇವರು ದೇವಾಲಯದ ಪರವಾಗಿ ಮಾತಾಜಿಯವರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .