Home Local ಬಿಜೆಪಿ ಕಾಗೇರಿ ಹಾಗೂ ರೂಪಾಲಿಗೆ ಟಿಕೆಟ್ ಫಿಕ್ಸ: ಇನ್ನುಳಿದಿದೆ 4 ಕ್ಷೇತ್ರ.

ಬಿಜೆಪಿ ಕಾಗೇರಿ ಹಾಗೂ ರೂಪಾಲಿಗೆ ಟಿಕೆಟ್ ಫಿಕ್ಸ: ಇನ್ನುಳಿದಿದೆ 4 ಕ್ಷೇತ್ರ.

SHARE

ಶಿರಸಿ: ರಾಜ್ಯದಲ್ಲಿ ಈ ಬಾರಿ ಹೇಗಾದರೂ ಮಾಡಿ ಬಹುಮತ ಪಡೆದು ಆಡಳಿತ ನಡೆಸಲು ಹಟಕ್ಕೆ ಬಿದ್ದಿರುವ ಮೋದಿ-ಷಾ ನೇತೃತ್ವದ ಭಾರತೀಯ ಜನತಾ ಪಕ್ಷವು ರಾಜ್ಯ ವಿಧಾನಸಭಾ ಚುಣಾವಣೆಗೆ ತನ್ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಜಿಲ್ಲೆಯ ವಿಚಾರದಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಮಾಜಿ ಸಚಿವ ಹಾಗು ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿ ಹೈ ಕಮಾಂಡ್ ಘೋಷಿಸಿದೆ.

ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಆಕಾಂಕ್ಷಿಗಳು ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದರೂ, ಕೊನೆಯದಾಗಿ ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಹಾಗು ಜಿಲ್ಲಾ ಮಹಿಳಾ ಮೋರ್ಚಾದ ಪ್ರಭಾರಿ ರೂಪಾಲಿ ನಾಯ್ಕ ಅಚ್ಚರಿಯಾಗಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನು ನಾಲ್ಕು ಕ್ಷೇತ್ರಗಳು ಬಾಕಿ ಉಳಿದಿದ್ದು, ಹೈಕಮಾಂಡ್ ಯಾವ ಅಭ್ಯರ್ಥಿಗೆ ಮಣೆ ಹಾಕುತ್ತದೆ ಎಂದು ಕಾದು ನೋಡಬೇಕಿದೆ.