Home Important ಐಪಿಎಲ್​​​ ಆಟಗಾರರಿಗೆ ಗುಡ್ ನ್ಯೂಸ್..!

ಐಪಿಎಲ್​​​ ಆಟಗಾರರಿಗೆ ಗುಡ್ ನ್ಯೂಸ್..!

SHARE

ಐಪಿಎಲ್​​ ಮೂಲಕ ಕೋಟಿ-ಕೋಟಿ ಹಣ ಜೇಬಿಗಿಳಿಸಿಕೊಳ್ಳುತ್ತಿರುವ ಕ್ರಿಕೆಟರ್ಸ್​​​ಗೆ ಈಗ ಬಿಸಿಸಿಐ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಐಪಿಎಲ್​ ಆಡುತ್ತಿರುವ​ ಆಟಗಾರರ ದೈನಂದಿನ ಭತ್ಯೆಯಲ್ಲಿ ಬಿಸಿಸಿಐ ಬದಲಾವಣೆ ಮಾಡಿದೆ.

ಭತ್ಯೆಯಲ್ಲಿ ಬಂಪರ್..!

ಈ ಹಿಂದೆ ಆಟಗಾರರ ಟಿಎ, ಡಿಎಯನ್ನು ನಗದು ರೂಪದಲ್ಲಿ ಪ್ರತಿದಿನ ನೀಡಲಾಗುತಿತ್ತು. ಆದರೆ ಇದು ತಂಡದ ವ್ಯವಸ್ಥಾಪಕರಿಗೆ ದೊಡ್ಡ ತಲೆನೋವಾಗಿತ್ತು. ಇದನ್ನ ತಪ್ಪಿಸಲು ಬಿಸಿಸಿಐ ಹೊಸ ಮಾರ್ಗ ಕಂಡುಕೊಂಡಿದೆ. ಅಲ್ಲದೇ 3,800 ಇದ್ದ ಆಟಗಾರರ ದಿನದ ಭತ್ಯೆಯನ್ನ 5 ಸಾವಿರ ರೂಪಾಯಿಗೆ ಹೆಚ್ಚಿಸಿದೆ. ಅಲ್ಲದೆ ಇಷ್ಟುದಿನ ಹಣವನ್ನು ಕೈಯಲ್ಲೇ ನೀಡಲಾಗುತ್ತಿತ್ತು. ಆದರೆ ಇದೀಗ ನೇರವಾಗಿ ಖಾತೆಗೆ ಹಣ ಜಾಮಾಯಿಸಲು ತೀರ್ಮಾನಿಸಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ನಗದು ನೀಡಲು ಬಿಸಿಸಿಐ ನಿರ್ಧರಿಸಿದೆ.

ಪಂಚತಾರಾ ಹೋಟೆಲ್​​​ಗಳಲ್ಲಿ ಒಂದು ಊಟಕ್ಕೆ 2500 ರೂ.ಇದೆ. ಆದ್ರಿಂದ 3,800 ರೂ. ಸಾಕಾಗುತ್ತಿಲ್ಲ ಎಂದು ಆಟಗಾರರು ದೂರಿದ್ದರು. ಇದ್ರಿಂದ ಬಿಸಿಸಿಐ ದಿನದ ಭತ್ಯೆ ಹೆಚ್ಚಿಸಿದೆ.ಈ ಹಿಂದೆ ಸೌತ್ ಆಫ್ರಿಕಾದಲ್ಲಿ ನಡೆದಿದ್ದ ಐಪಿಎಲ್​​​ ವೇಳೆ ಪ್ರತಿ ಆಟಗಾರರಿಗೆ 100 ಡಾಲರ್​​​​​​​ ದಿನದ ಭತ್ಯೆ ನೀಡಲಾಗುತ್ತಿತ್ತು.