Home Important ಪ್ರಧಾನಿ ಮೋದಿಯಿಂದಲೂ ಉಪವಾಸ ಸತ್ಯಾಗ್ರಹ ಘೋಷಣೆ!

ಪ್ರಧಾನಿ ಮೋದಿಯಿಂದಲೂ ಉಪವಾಸ ಸತ್ಯಾಗ್ರಹ ಘೋಷಣೆ!

SHARE

ನವದೆಹಲಿ: ಏಪ್ರಿಲ್ 12ರಂದು ಪ್ರಧಾನಿ ನರೇಂದ್ರ ಮೋದಿ ಉಪವಾಸ ಸತ್ಯಾಗ್ರಹ ಮಾಡ್ತೀನಿ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಅಚ್ಚರಿ ಮೂಡಿಸಿದ್ದಾರೆ. ವಿರೋಧ ಪಕ್ಷಗಳು ಸಂಸತ್ತು ಕಾರ್ಯನಿರ್ವಹಿಸಲು ಬಿಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿರುವ ಪ್ರಧಾನಿ ಮೋದಿ, ಉಪವಾಸ ಮಾಡುವುದಾಗಿ ಘೋಷಿಸಿದ್ದಾರೆ. ಏಪ್ರಿಲ್​ 12ರಂದು ಅಮಿತ್​ ಶಾ ಜೊತೆಗೂಡಿ ಇಡೀ ದಿನ ಉಪವಾಸ ಮಾಡುವುದಾಗಿ ಮೋದಿ ಹೇಳಿದ್ದಾರೆ. ಎಲ್ಲಾ ಬಿಜೆಪಿ ಸಂಸದರು ಮೋದಿ ಹಾಗೂ ಅಮಿತ್​ ಶಾ ಗೆ ಸಾಥ್​ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಉಪವಾಸದ ಹೊರತಾಗಿ ಮೋದಿ ತಮ್ಮ ದಿನನಿತ್ಯದ ಕಾರ್ಯಗಳನ್ನ ಎಂದಿನಂತೆ ಮುಂದುವರೆಸಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ, ಹುಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಕಾವೇರಿ ವಿವಾದ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಪಿಎನ್​​ಬಿ ಹಗರಣ ಹಾಗೂ ಮುಂತಾದ ಕಾರಣಗಳನ್ನ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಕಾರಣ ಸಂಸತ್ತಿನ ಬಜೆಟ್​ ಅಧಿವೇಶನದ ಎರಡನೇ ಭಾಗಕ್ಕೆ ಅಡ್ಡಿಯುಂಟಾಗಿದೆ. ಮಾರ್ಚ್​​ 5ರಂದು ಆರಂಭವಾದ ಅಧಿವೇಶನದ ಎರಡನೇ ಭಾಗದಲ್ಲಿ ಯಾವುದೇ ಶಾಸಕಾಂಗ ಪ್ರಕ್ರಿಯೆಗಳು ನಡೆದಿಲ್ಲ.