Home Local ಶುಭಾರಂಭಗೊಂಡ ಹೊನ್ನಾವರ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನ

ಶುಭಾರಂಭಗೊಂಡ ಹೊನ್ನಾವರ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನ

SHARE

ಹೊನ್ನಾವರ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನ ಆಶ್ರಯದಲ್ಲಿ ತಾಲೂಕಿನ‌ಮೂಡಗಣಪತಿ ಸಭಾ ಭವನದಲ್ಲಿ ಕನ್ನಿಕಾ ಹೆಗಡೆ ವೇದಿಕೆಯಲ್ಲಿ ಶುಭಾರಂಭಗೊಂಡಿತು. ಯಕ್ಷ ನೃತ್ಯದ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಾಹಿತಿಗಳಾದ ಶ್ರೀ ಎನ್ .ಎಸ್ ಹೆಗಡೆ ಕೆರೆಕೋಣ ಸರ್ವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತು.

ಪ್ರಾಸ್ಥಾವಿಕವಾಗಿ ಮಾತನಾಡಿದ ತಾಲೂಕಾ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಗರಾಜ ಹೆಗಡೆ ಅಪಗಾಲ ಮಾತನಾಡಿ ನೀತಿಸಂಹಿತೆ ಜಾರಿಯಲ್ಲಿದ್ದು ಅದನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದರು. ನಾಡಿನಾದ್ಯಂತ ಹೆಸರು ಮಾಡಿದ ಸಾಹಿತಿಗಳು ಹೊನ್ನಾವರದಲ್ಲಿದ್ದಾರೆ. ಹೊನ್ನಾವರದಲ್ಲಿ ಇರುವ ಹಿರಿಯರನ್ನು ಹಾಗೂ ಸಾಹಿತ್ಯ ಕೃಷಿ ಮಾಡಿದವರನ್ನು ಗುರುತಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ಕಸಾಪದ ಜಿಲ್ಲಾ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಮಾತನಾಡಿ ಹೊನ್ನಾವರದ ಈ ಸಮ್ಮೇಳನ ಯಶಸ್ವಿಗೆ ಶ್ರಮಿಸಿದ ಎಲ್ಲರನ್ನು ಅಭಿನಂದಿಸಬೇಕು. ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉತ್ತರಕನ್ನಡದ ಸಾಹಿತಿಗಳನ್ನು ಅಧ್ಯಕ್ಷರಾಗಿ ಆಯ್ಕೆ‌ಮಾಡುವತ್ತ ನಮ್ಮ ಗಮನ ಇದೆ ಎಂದು ಅಭಿಪ್ರಾಯಪಟ್ಟರು.

ಪ್ರಶಾಂತ ಹೆಗಡೆ ಮೂಡಲಮನೆ ವರದಿ ವಾಚಿಸಿ ಸರ್ವಾಧ್ಯಕ್ಷರನ್ನು ಪರಿಚಯಿಸಿದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಮಂಜುಸುತರವರ ಕನ್ನಡಾಂಬೆ ಪುಸ್ಥಕ ಬಿಡುಗಡೆಮಾಡಿದ ಶ್ರೀ ಮಹಾಬಲ‌ಮೂರ್ತಿ ಕೊಡ್ಲಕೆರೆ ಮಾತನಾಡಿ ಇದೊಂದು ಅಪರೂಪದ ಅವಕಾಶ ಈ ಸಮ್ಮೇಳನದ ಸಂಘಟಕರಿಗೆ ಧನ್ಯವಾದ ಎಂದರು.

ಪ್ರಥಮ ಉ.ಕ ಸಾಹಿತ್ಯ ಸಮ್ಮೇಳನದ ನೆನಪುಗಳನ್ನು ಸ್ಮರಿಸಿದ ಅವರು ಭಾರತ ಚೀನಾ ಯುದ್ಧ ಗೆದ್ದ ಸಂಭೃಮದಲ್ಲಿ ಆ ಸಮ್ಮೇಳನ ಅವಿಸ್ಮರಣೀಯವಾಗಿತ್ತು ಎಂದರು. ಜಿಯು ಭಟ್ ಹಾಗೂ ಜಯಂತ ಕಾಯ್ಕಿಣಿಯವರ ಜೊತೆಗಿನ ಒಡನಾಟವನ್ನು ಸ್ಮರಿಸಿದ ಅವರು ಜೀವನದ ಲವಲವಿಕೆ ಕಲಿಯಲು ಇಂತವರ ಬದುಕು ಆದರ್ಶ ಎಂದರು.

ಧ್ವಜ ಹಸ್ತಾಂತರಿಸಿದ ಜಿ.ಯು ಭಟ್ಟ ಮಾತನಾಡಿ ಕನ್ನಡ ಧ್ವಜ ಹಸ್ತಾಂತರಿಸಿದ್ದೇನೆ ವಿನಃ ಕನ್ನಡದ ಓದು ನಿಲ್ಲಿಸಿಲ್ಲ ಎಂದರು. ತಿಳಿದವರು ಸಾಹಿತ್ಯ ಬಲ್ಲವರು ಈ ಕಾಲದಲ್ಲಿ ಕಿತ್ತಡುವುದನ್ನು ನಾವು ಖಂಡಿಸಬೇಕು ಎಂದರು. ಮಾನವನ ಆರೋಗ್ಯಕ್ಕೆ ಪರಿಸರದ ಆರೋಗ್ಯ ಮುಖ್ಯವಾಗಿದೆ, ಸಾಹಿತ್ಯವೂ ಮಾನವನ ಆರೋಗ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತದೆ ಎಂದರು. ಬೇಕಾಗಿರುವುದನ್ನು ಕೊಳದಳುವ ನಾವುಗಳು ಪುಸ್ತಕ ಕೊಳದಳುವುದಿಲ್ಲ ಅದು ಇಂದಿನ ‌ಸತ್ಯ. ಸಂಬಳ ಪಡೆಯುವ ಶಿಕ್ಷಕರು ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಪಾಠ ಮಾಡುವುದಷ್ಟೇ ಕನ್ನಡ ಶಿಕ್ಷಕರ ಕರ್ತವ್ಯವಲ್ಲ ಸಾಹಿತ್ಯದ ಕಡೆಗೆ ಅವರ ಒಲವು ಬರಲಿ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಎನ್ ಎಸ್ ಹೆಗಡೆ ಮಾತನಾಡಿ ಸರ್ವಾಧ್ಯಕ್ಷರಾಗಿ ನನ್ನನ್ನು ಆರಿಸಿದ ಬಗ್ಗೆ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಕನ್ನಡ ಧ್ವಜ ಬಟ್ಟೆಯ ತುಂಡಲ್ಲ ಅದಕ್ಕೆ ಅದರದೇ ಗೌರವ ಇದೆ. ನಮ್ಮ ಸುತ್ತಲೂ ಮುಸುಕಿನ ‌ಜಾಗತೀಕರಣ,ಖಾಸಗೀಕರಣ, ಉದಾರೀಕರಣಗಳ ದಟ್ಟ ಪ್ರಭಾವ ಬೀರುತ್ತಿದೆ ಎಂದರು.

ಸಾಹಿತ್ಯಾಸಕ್ತರು ಹಾಗೂ ಸಮೀತಿ ಸದಸ್ಯರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಿಸಿದರು. ವಿವಿಧ ಗೋಷ್ಠಿಗಳು ಹಾಗೂ ಕಾರ್ಯಕ್ರಮಗಳು ನಡೆದವು.