Home Local ಚುನಾವಣಾ ಕಾರ್ಯಾಚರಣೆ ಚುರುಕು: ಮಂಕಾಳ ವೈದ್ಯರಿಂದ ನಡೆದಿದೆ ಬಿರುಸಿನ ಪ್ರಚಾರ ಕಾರ್ಯ

ಚುನಾವಣಾ ಕಾರ್ಯಾಚರಣೆ ಚುರುಕು: ಮಂಕಾಳ ವೈದ್ಯರಿಂದ ನಡೆದಿದೆ ಬಿರುಸಿನ ಪ್ರಚಾರ ಕಾರ್ಯ

SHARE

ಭಟ್ಕಳ : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿ ಕಾಂಗ್ರೇಸ್‍ನಿಂದ ಟಿಕೇಟ್ ಖಚಿತಪಡಿಸಿಕೊಂಡು ಬಂದ ಹಾಲಿ ಶಾಸಕ ಮಂಕಾಳ ವೈದ್ಯ ಮುಂಡಳ್ಳಿಯಲ್ಲಿ ಬಿರುಸಿನ ಪ್ರಚಾರ ಕಾರ್ಯ ಆರಂಭಿಸಿದರು.

ಮುಂಡಳ್ಳಿ ಸತ್ಯನಾರಾಯಣ ದೇವಸ್ಥಾನ ಹಾಗೂ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಅವರು ಮುಂಡಳ್ಳಿಯ ಐದು ಬೂತ್ ಕಮೀಟಿ ಕಾರ್ಯಕರ್ತರನ್ನು ಭೇಟಿ ಮಾಡಿ ಸಭೆ ನಡೆಸಿದರು.

ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕರು ನನ್ನ ಅಧಿಕಾರವಧಿಯಲ್ಲಿ ಪಕ್ಷಬೇದ ಮರೆತು ಕೆಲಸ ಮಾಡಿದ್ದೇನೆ. ನನ್ನ ಮನೆಗೆ ಬರುವ ಬಡವರ ಕೆಲಸವನ್ನು ಮಾಡಿಕೊಟ್ಟಿದ್ದೇನೆ. ಹಾಗೇಯೇ ನಾಯಕರ ಕೆಲಸವನ್ನು ಮಾಡಿಕೊಟ್ಟಿದ್ದೇನೆ. ಕಳೆದ ವಿಧಾನಸಭಾ ಚುಣಾವಣೆಯಲ್ಲಿ ನನಗೆ ಎನೂ ಮತ ನೀಡದ ಕ್ಷೇತ್ರಕ್ಕೂ ಯಾವುದೇ ತಾರತಮ್ಯ ತೋರದೇ ಅಭಿವೃದ್ದಿ ಮಾಡಿದ್ದೇನೆ ಎಂದು ತಿಳಿಸಿದರು.

ಕಳೇದ 5 ವರ್ಷದ ಅವಧಿಯಲ್ಲಿ ಎರಡೂವರೆ ವರ್ಷ ಕ್ಷೇತ್ರದ ಸಮಸ್ಯೆ ಅರಿಯಲು ಕಳೇದ ಹೋದ ಕಾರಣ ಇನ್ನೇರಡೂವರೆ ವರ್ಷದಲ್ಲಿ ಕ್ಷೇತ್ರದ ಪ್ರತಿ ಭೂತನಲ್ಲಿ ಆಗಬೇಕಾದ ಎಲ್ಲಾ ಕಾರ್ಯಗಳನ್ನು ಮಾಡಿ ಮುಗಿಸಿದ ತೃಪ್ತಿ ನನಗಿದೆ ಎಂದು ತಿಳಿಸಿದರು. ಮುಂಡಳ್ಳಿ ಭಾಗಕ್ಕೆ ಅಂದಾಜು 10 ಕೋಟಿ ಅನುದಾನ ತಂದಿದ್ದು ಸಾಕಷ್ಟು ಅಭಿವೃದ್ದಿ ಕಾರ್ಯಗಳು ಆಗಿವೆ. ಹಾಗಾಗಿ ಕಾರ್ಯಕರ್ತರು ಈ ಬಾರಿ ಹುಮ್ಮಸ್ಸಿನಿಂದ ಕೆಲಸ ಮಾಡಿ ಮತದಾನ ವೇಳೆ ಶೇಕಡಾ 80ಕ್ಕೂ ಹೆಚ್ಚೂ ಮತಗಳು ಕಾಂಗ್ರೇಸ್ ಪಕ್ಷಕ್ಕೆ ಬೀಳುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠ್ಠಲ ನಾಯ್ಕ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಪಂ ಸದಸ್ಯ ಸಿಂಧೂ ನಾಯ್ಕ, ತಾಪಂ ಅಧ್ಯಕ್ಷ ಈಶ್ವರ ನಾಯ್ಕ ಸದಸ್ಯೆ ಲಕ್ಷ್ಮೀ ಗೊಂಡ, ಮುಂಡಳ್ಳಿ ಕಾಂಗ್ರೇಸ್ ಮುಖಂಡ ನಾರಾಯಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.