Home Local ನರೇಂದ್ರ ಮೋದಿಯವರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ: ಬೆಂಗಳೂರಿನಲ್ಲಿ ಬಿಜೆಪಿ ಸಂಸದರ ಜೊತೆಗೆ ಉಪವಾಸಕ್ಕೆ ಕುಳಿತ ಸೂರಜ್...

ನರೇಂದ್ರ ಮೋದಿಯವರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ: ಬೆಂಗಳೂರಿನಲ್ಲಿ ಬಿಜೆಪಿ ಸಂಸದರ ಜೊತೆಗೆ ಉಪವಾಸಕ್ಕೆ ಕುಳಿತ ಸೂರಜ್ ನಾಯ್ಕ ಸೋನಿ.

SHARE

ಬೆಂಗಳೂರು: ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಪ್ರತಿಪಕ್ಷ‌ ಕಾಂಗ್ರೆಸ್ ವಿರುದ್ಧ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಂಗಳೂರಿನಲ್ಲಿ ಬಿಜೆಪಿ ಸಂಸದರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಬಿಜೆಪಿ ಪ್ರಮುಖ ಹಾಗೂ ಕುಮಟಾ ಹೊನ್ನಾವರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಸೂರಜ್ ನಾಯ್ಕ ಸೋನಿ ಭಾಗವಹಿಸಿದರು.

ಏನಿದು?

ಏಪ್ರಿಲ್ 12ರಂದು ಪ್ರಧಾನಿ ನರೇಂದ್ರ ಮೋದಿ ಉಪವಾಸ ಸತ್ಯಾಗ್ರಹ ಮಾಡ್ತೀನಿ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಅಚ್ಚರಿ ಮೂಡಿಸಿದ್ದರು. ವಿರೋಧ ಪಕ್ಷಗಳು ಸಂಸತ್ತು ಕಾರ್ಯನಿರ್ವಹಿಸಲು ಬಿಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿರುವ ಪ್ರಧಾನಿ ಮೋದಿ, ಉಪವಾಸ ಮಾಡುವುದಾಗಿ ಘೋಷಿಸಿದ್ದರು. ಏಪ್ರಿಲ್​ 12ರಂದು ಅಮಿತ್​ ಶಾ ಜೊತೆಗೂಡಿ ಇಡೀ ದಿನ ಉಪವಾಸ ಮಾಡುವುದಾಗಿ ಮೋದಿ ಹೇಳಿದ್ದು ಉಪವಾಸ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಎಲ್ಲಾ ಬಿಜೆಪಿ ಸಂಸದರು ಮೋದಿ ಹಾಗೂ ಅಮಿತ್​ ಶಾ ಗೆ ಸಾಥ್​ ನೀಡಿರುವುದಾಗಿ ವರದಿಯಾಗಿದೆ.