Home Local ಕುಮಟಾ ಹೊನ್ನಾವರದಲ್ಲಿ‌ ಕಾಂಗ್ರೆಸ್ ನಿಂದ ನಡೆದಿದೆ ಚುನಾವಣಾ ರಣತಂತ್ರ.

ಕುಮಟಾ ಹೊನ್ನಾವರದಲ್ಲಿ‌ ಕಾಂಗ್ರೆಸ್ ನಿಂದ ನಡೆದಿದೆ ಚುನಾವಣಾ ರಣತಂತ್ರ.

SHARE

ಕುಮಟಾ : ಎಲ್ಲೆಡೆ ಚುನಾವಣಾ ಪ್ರಚಾರ ರಂಗುಪಡೆಯುತ್ತಿದೆ. ಕುಮಟಾ ಹೊನ್ನಾವರ ಕ್ಷೇತ್ರ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದ್ದು ಕ್ಷೇತ್ರವನ್ನು ಉಳಿಸಿಕೊಂಡು ಜಯಭೇರಿ ಬಾರಿಸುವತ್ತ ಕಾಂಗ್ರೆಸ್ ನಾಯಕರು ಪ್ರಚಾರದ ಭರಾಟೆ ಪ್ರಾರಂಭಿಸಿದ್ದಾರೆ.ಚುನಾವಣಾ ರಣತಂತ್ರವನ್ನೂ ರೂಪಿಸುತ್ತಿದ್ದಾರೆ.

ಈ ಸಂಬಂಧ ಇಂದು ತಾಲೂಕಿನ ಮೂರುರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಂತೆಗುಳಿ-ಸೊಪ್ಪಿನಹೊಸಳ್ಳಿ ,ಮೂರೂರು,ಅಳಕೋಡ ಹಾಗೂ ದಿವಗಿ ಪಂಚಾಯತ ಕ್ಷೇತ್ರದಲ್ಲಿ ಬೂತ್ ಮಟ್ಟದ ಸಭೆಯನ್ನು ಏರ್ಪಡಿಸಲಾಗಿತ್ತು.

ಈ ಸಂಧರ್ಭದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ತಯಾರಿ ಬಗ್ಗೆ ಚರ್ಚಿಸಲಾಯಿತು.ಅದೇ ರೀತಿ ಸಭೆಯಲ್ಲಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು, ಕ್ರಶ್ರೀ ವಿ ಎಲ್ ನಾಯ್ಕ, ತಾರಾ ಗೌಡ, ಮಾಲಾ ಅಂಬಿಗ, ಪ್ರಾನ್ಸಿಸ್ ಫರ್ನಾಂಡಿಸ್ ಹಾಗೂ ಇನ್ನೂ ಅನೇಕರು ಪಾಲ್ಗೊಂಡರು.