Home Local ಯುವಕರ ಮನಗೆದ್ದ ಪ್ರದೀಪ ನಾಯಕ! ಜೆಡಿಎಸ್ ಗೆ ಯುವಪಡೆಯ ಬಲ?

ಯುವಕರ ಮನಗೆದ್ದ ಪ್ರದೀಪ ನಾಯಕ! ಜೆಡಿಎಸ್ ಗೆ ಯುವಪಡೆಯ ಬಲ?

SHARE

ಕುಮಟಾ ಹೊನ್ನಾವರ ಯುವಕರದ್ದು ಈಗ ಜೆಡಿಎಸ್ ಸೇರ್ಪಡೆ ಪರ್ವ ಎನಿಸುತ್ತದೆ. ಯುವ ಪಡೆ ಜೆಡಿಎಸ್ ನತ್ತ ಮುಖಮಾಡಿದ್ದಾರಾ ಎಂಬ ಪ್ರಶ್ನೆಯೂ ಕಾಡುತ್ತಿದೆ ಹಲವರಿಗೆ.ಬಿಜೆಪಿ ಹಾಗೂ ಕಾಂಗ್ರೆಸ್‌ ಟಿಕೆಟ್ ಲಾಬಿ ಹಾಗೂ ಟಿಕೆಟ್ ಹಂಚಿಕೆಯ ಗೊಂದಲ ಜೆಡಿಎಸ್ ಗೆ ಸಕತ್ ಪ್ಲಸ್ ಪಾಯಿಂಟ್ ಆಗಿದೆ . ಪ್ರದೀಪ ನಾಯಕ ದೇವರಬಾವಿ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷ , ಹಿರಿಯರನ್ನು ಹಾಗೂ ಈಗ ಯುವಪಡೆಯನ್ನು ತನ್ನತ್ತ ಸೆಳೆಯುತ್ತಿದೆ.

ಎಲ್ಲರ ಮಾತುಗಳನ್ನು ಗಣನೆಗೆ ತೆಗೆದುಕೊಂಡು ತನ್ನದೇ ಕಾರ್ಯವೈಖರಿಯಿಂದ ಮುನ್ನಡೆಯುತ್ತಿರುವ ಪ್ರದೀಪ್ ನಾಯಕರ ಜೊತೆ ಎಲ್ಲ ಭಾಗದಿಂದ ಯುವಕರು ಬಂದು ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಪಕ್ಷಕ್ಕೆ ಪ್ರಬಲತೆ ಯನ್ನು ತರುತ್ತಿದೆ .

ವಾಲ್ಗಳ್ಳಿ, ಕುಮಟಾ, ಚಂದಾವರ, ಹೊನ್ನಾವರ, ಹಳದೀಪುರ ಹಾಗೂ ಅನೇಕ ಕಡೆಯ ಯುವಕರು ಜೆಡಿಎಸ್ ಗೆ ಸೇರ್ಪಡೆಗೊಂಡು ಜೆಡಿಎಸ್ ನ ಜೊತೆ ಗುರುತಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

ಇದರಿಂದ ಪಕ್ಷಕ್ಕೆ ಬಲ ಬಂದಿದ್ದು ಯುವಕರು ಜೆಡಿಎಸ್ ನತ್ತ ಮುಖ ಮಾಡಿ ಜೆಡಿಎಸ್ ಹಾಗೂ ಪ್ರದೀಪ್ ನಾಯಕರ ಜೊತೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವುದು ಇನ್ನಷ್ಟು ಬಲ ತಂದಿದೆ ಎನ್ನುತ್ತಾರೆ ಅವರ ಆಪ್ತ ವಲಯ .

ಅದೇನೇ ಇರಲಿ ತನ್ನದೇ ಆದ ಹೊಸ ರೂಪ ಹಾಗೂ ಹೊಸ ಚೈತನ್ಯದಿಂದ ಜೆಡಿಎಸ್ ಮತ್ತು ಪ್ರದೀಪ್ ನಾಯಕ್ ಕುಮಟಾ ಹೊನ್ನಾವರ ಕ್ಷೇತ್ರದ ಚುನಾವಣೆಗೆ ರಂಗು ತಂದು ತ್ರಿಕೋನ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ ಎನ್ನುತ್ತಿದ್ದಾರೆ ಸಾರ್ವಜನಿಕರು.