Home Local ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರವರ 127 ನೇ ಜನ್ಮ...

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರವರ 127 ನೇ ಜನ್ಮ ದಿನಾಚರಣೆ ಕಾರ್ಯಕ್ರಮ.

SHARE

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರವರ 127 ನೇ ಜನ್ಮ ದಿನಾಚರಣೆಯನ್ನು ಕೆ. ಪಿ. ಸಿ. ಸಿ. ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿಕುಮಾರ್ ಮೋಹನ್ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಂಬೇಡ್ಕರ್ ರವರ ಚಿಂತನೆ ಈ ಸಮಾಜದಲ್ಲಿ ಶಾಶ್ವತವಾಗಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಜಗದೀಶ ತೆಂಗೆರಿ, ಹೊನ್ನಾವರ ತಾಲೂಕ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಸೋಮಯ್ಯ ಮುಕ್ತಿ, ಪಕ್ಷದ ಮುಖಂಡರಾದ ಗಯೂರ್ ಸಾಬ್, ಅಗ್ನೇಲ ಡಯಾಸ, ದಾಮೋದರ ನಾಯ್ಕ, ವಿನಾಯಕ ಶೇಟ್, ಅಜಿತ್ ತಾಂಡೆಲ್, ಕೇಶವ ಮೇಸ್ತ್ ಮುಂತಾದವರು ಉಪಸ್ಥಿತರಿದ್ದರು.