Home Local ಟಿಕೆಟ್ ಗಿಟ್ಟಿಸಿಕೊಂಡ ಭೀಮಣ್ಣ ನಾಯ್ಕ: ಶಿರಸಿ ಸಿದ್ಧಾಪುರ ಕ್ಷೇತ್ರಕ್ಕೀಗ “ಭೀಮ ಬಲ”

ಟಿಕೆಟ್ ಗಿಟ್ಟಿಸಿಕೊಂಡ ಭೀಮಣ್ಣ ನಾಯ್ಕ: ಶಿರಸಿ ಸಿದ್ಧಾಪುರ ಕ್ಷೇತ್ರಕ್ಕೀಗ “ಭೀಮ ಬಲ”

SHARE

ಶಿರಸಿ: ರಾಜ್ಯ ವಿಧಾನಸಭಾ ಚುಣಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು, ಬಹು ನಿರೀಕ್ಷಿತ ಶಿರಸಿ – ಸಿದ್ದಾಪುರ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಭೀಮಣ್ಣ ನಾಯ್ಕ ಅವರಿಗೆ ಟಿಕೆಟ್ ಲಭಿಸಿದೆ.ಈಗಾಗಲೇ ಭೀಮಣ್ಣ ನಾಯ್ಕ ಭರದ ಪ್ರಚಾರದಲ್ಲಿ ತೊಡಗಿದ್ದರು. ಅವರಿಗೀಗ ಭೀಮ ಬಲ ಬಂದಂತಾಗಿದೆ.

ಅದರಂತೆ ಹಳಿಯಾಳಕ್ಕೆ ಆರ್ ವಿ ದೇಶಪಾಂಡೆ, ಯಲ್ಲಾಪುರಕ್ಕೆ ಶಿವರಾಮ್ ಹೆಬ್ಬಾರ್, ಕುಮಟ – ಶಾರದಾ ಶೆಟ್ಟಿ, ಕಾರವಾರ – ಸತೀಶ್ ಸೈಲ್, ಭಟ್ಕಳ – ಮಂಕಾಳು ವೈದ್ಯ ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ. ಶಿರಸಿ – ಸಿದ್ದಾಪುರ ಕ್ಷೇತ್ರಕ್ಕೆ ನಿವೇದಿತ್ ಆಳ್ವಾ ಹಾಗು ಭೀಮಣ್ಣ ನಾಯ್ಕ ನಡುವೆ ಬಾರೀ ಪೈಪೋಟಿ ನಡೆದಿತ್ತು, ಕೊನೆಗೂ ಭೀಮಣ್ಣ ನಾಯ್ಕ ಟಿಕೆಟ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಿಗೆ ಮಾತ್ರ ಬಿಜೆಪಿಯ ಅಭ್ಯರ್ಥಿಯ ಆಯ್ಕೆ ನಡೆಯಬೇಕಿದ್ದು, ಜೆಡಿಎಸ್ ನಿಂದ ಈಗಾಗಲೇ ಆರೂ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆಯಾಗಿದೆ.