Home Local ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ನಡೆದಿದೆ ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯ

ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ನಡೆದಿದೆ ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯ

SHARE

ಕುಮಟಾ: ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಧಿಪತ್ಯ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನ ಮುಂದುವರಿಸಿದ್ದು ಕಾರ್ಯಕರ್ತರನ್ನು ಹುರಿದುಂಬಿಸಿ ಪ್ರಚಾರ ಕಣಕ್ಕಿಳಿಸುವ ಕಾರ್ಯಕ್ಕೆ ಮುಂದಾಗಿದೆ.

ಇಂದು ಗೋಕರ್ಣ ಹಾಗೂ ಹನೇಹಳ್ಳಿಯ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಬೂತ್ ಮಟ್ಟದ ಸಭೆಯನ್ನು ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ ಕಾಂಗ್ರೆಸ್ ಸರಕಾರದ ಸಾಧನೆ ಹಾಗೂ ಮುಂದಿನ ಕಾರ್ಯ ಪ್ರಣಾಳಿಕೆಯ ಕುರಿತಾಗಿ ಜನತೆಗೆ ಅರಿವು ಮೂಡಿಸಿದರು.

ಈ ಸಮಯದಲ್ಲಿ ಘಟಕ ಅಧ್ಯಕ್ಷರಾದ ಶ್ರೀ ಮಹಾಬಲೇಶ್ವರ ಗೌಡ, ಶ್ರೀ ದೇವೇಂದ್ರ ಗೌಡ, ಜಯಂತ ನಾಯ್ಕ ಹನೇಹಳ್ಳಿ, ಶ್ರೀ ಮಾರುತಿ ತಾಂಡೇಲ್, ಗೋಪಾಲ್ ಬಾಂದೇಕರ್, ಪೇರು ಅಂಬಿಗ, ಬ್ಲಾಕ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ,ಶ್ರೀ ವಿಜಯ ಹೊಸ್ಕಟ್ಟಾ, ಶ್ರೀ ಜಗದೀಶ ಹರಿಕಂತ್ರ, ಶ್ರೀಮತಿ ತಾರಾ ಗೌಡ, ಶ್ರೀಮತಿ ಸುರೇಖಾ ವಾರೇಕರ,ಶ್ರೀಮತಿ ಅನೀತಾ ಮಾಪಾರಿ, ಶ್ರೀ ನಾಗರಾಜ ಗೌಡ ಮುಂತಾದವರು ಉಪಸ್ಥಿತರಿದ್ದರು.