Home Article ಶ್ರೀಸಮರ್ಥರ ಮೂರ್ತಿಯೊಂದಿಗೆ ಶ್ರೀಶಂಕರನ ಸ್ಥಾಪನೆ ಅಂದರೆ ಹಾಲಿನಲ್ಲಿ ಸಕ್ಕರೆ ಬಿದ್ದಂತಾಯಿತು.

ಶ್ರೀಸಮರ್ಥರ ಮೂರ್ತಿಯೊಂದಿಗೆ ಶ್ರೀಶಂಕರನ ಸ್ಥಾಪನೆ ಅಂದರೆ ಹಾಲಿನಲ್ಲಿ ಸಕ್ಕರೆ ಬಿದ್ದಂತಾಯಿತು.

SHARE

ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ

ಶ್ರೀಸಮರ್ಥರ ಮೂರ್ತಿಯೊಂದಿಗೆ ಶ್ರೀಶಂಕರನ ಸ್ಥಾಪನೆ ಅಂದರೆ ಹಾಲಿನಲ್ಲಿ ಸಕ್ಕರೆ ಬಿದ್ದಂತಾಯಿತು ಎಂದು ಅದಾರಿಗೆ ಅನಿಸದೇ ಇರುವದಿಲ್ಲ!

(ಇಸವಿ ಸನ ೧೯೬೮ರಲ್ಲಿ ಶ್ರೀ ಗಜಾನನ ಗುರುಜೀಯವರಿಗೆ ಬರೆದ ಪತ್ರದ ಎರಡನೆಯ ಭಾಗ)

ಶ್ರೀಸಮರ್ಥರು ಮಾರುತಿರಾಯನ ಅವತಾರವಾಗಿದ್ದರು. ಮಾರುತಿರಾಯನನ್ನು ರುದ್ರನ ಅವತಾರವೆಂದು ಮನ್ನಿಸಲಾಗಿದೆ. ಆದುದರಿಂದ ಶ್ರೀಸಮರ್ಥರ ಮೂರ್ತಿಯೊಂದಿಗೆ ಶ್ರೀಶಂಕರನ ಸ್ಥಾಪನೆ ಅಂದರೆ ಹಾಲಿನಲ್ಲಿ ಸಕ್ಕರೆ ಬಿದ್ದಂತಾಯಿತು ಎಂದು ಅದಾರಿಗೆ ಅನಿಸದೇ ಇರುವದಿಲ್ಲ!

‘ಅಧಿಕಸ್ಯಾಧಿಕಂ ಫಲಮ್’
ಇದಕ್ಕಾಗಿ ಶ್ರೀಗಜಾನನ ಮಹಾರಾಜ ಪಟ್ಟೇಕರರಿಗೆ ಮತ್ತು ನಿಮಗೆ ಎಷ್ಟು ಅಭಿನಂದನ ಮಾಡಿದರೂ ಕಡಿಮೆಯೇ.

ಶ್ರೀಗುರು, ಶ್ರೀರಾಮ, ಶ್ರೀಶಂಕರ ಮತ್ತು ಶ್ರೀಸಮರ್ಥ ಇವರೆಲ್ಲರ ಕೃಪೆ -ಆಶೀರ್ವಾದಗಳಿಂದ ನೀವು ಕೈಗೆತ್ತಿಕೊಂಡ ಈ ಮಹಾನ ಕಾರ್ಯ ನಿರ್ವಿಘ್ನತೆಯಿಂದ ಮತ್ತು ಉತ್ಕೃಷ್ಟತೆಯಿಂದ ಆದಷ್ಟು ಬೇಗನೆ ಪೂರ್ಣವಾಗಲಿ ಮತ್ತು ಈ ಕಾರ್ಯದೊಂದಿಗೇ ಟಾಕಳಿ ಮಠದ ಜೀರ್ಣೋದ್ಧಾರದ ನಿಮ್ಮ ಮನೀಷೆಯನ್ನು ನೋಡಿ ನನಗೆ ಆಕಾಶದಲ್ಲೂ ಹಿಡಿಸದಷ್ಟು ಆನಂದವಾಗಿದೆ.

ಎರಡೂ ಕಾರ್ಯಗಳಲ್ಲಿ ನಿಮಗೆ ಸಂಪೂರ್ಣ ಯಶಸ್ಸು ಸಿಗಲಿ. ಶ್ರೀಮಠದ ಮತ್ತು ಈ ಶಿವ-ಸಮರ್ಥ ದೇವಾಲಯದ ಪಾವನ ಕಾರ್ಯ, ತನ್ನ ಸುಭದ್ರತೆಯಿಂದ, ಶ್ರೀಸಮರ್ಥರ ಉಜ್ವಲ ತಪಶ್ಚೈರ್ಯದ ಮತ್ತು ದಿವ್ಯ ದೇಶ-ಧರ್ಮೋದ್ಧಾರದ ಸಾಕ್ಷವನ್ನು ದೃಢೀಕರಿಸುತ್ತ ‘ಯಾವಚ್ಚಂದ್ರದಿವಾಕರೌ’ ಅಚಲವಾಗಿರಲಿ.
ಮತ್ತೆಲ್ಲಾ ಕ್ಷೇಮ.

‘ಸರ್ವೇಪಿ ಸುಖಿನಃ ಸಂತು| ಸರ್ವೇ ಸಂತು ನಿರಾಮಯಾ|
ಸರ್ವೇ ಭದ್ರಾಣಿ ಪಶ್ಯಂತು| ಮಾ ಕಶ್ಚಿದ್ದುಖಃಸ್ವಮಾಪ್ನುಯಾತ್|’
||ಇತಿ ಶಿವಮ್||
ಶ್ರೀಧರ