Home Local ಶಂಕರ ಪಂಚಮಿಗೆ ಬಾನ್ಕುಳಿ ಸಿದ್ಧ: ರಾಘವೇಶ್ವರ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಲಿದೆ ಕಾರ್ಯಕ್ರಮಗಳು.

ಶಂಕರ ಪಂಚಮಿಗೆ ಬಾನ್ಕುಳಿ ಸಿದ್ಧ: ರಾಘವೇಶ್ವರ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಲಿದೆ ಕಾರ್ಯಕ್ರಮಗಳು.

SHARE

ಸಿದ್ದಾಪುರ: ತಾಲೂಕಿನ ಭಾನಕುಳಿಯಲ್ಲಿ ಶಂಕರ ಪಂಚಮಿ ಕುರಿತಾದ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಂಕರ ಪಂಚಮಿ ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡಲಾಯಿತು.

ಈ ಕುರಿತು ಮಾತನಾಡಿದ ಶಂಕರ ಪಂಚಮಿ ಸಮಿತಿ ಅಧ್ಯಕ್ಷ ಭಾಸ್ಕರ್ ಹೆಗಡೆ, ಇದು 7ನೇ ವರ್ಷದ ಶಂಕರ ಪಂಚಮಿಯಾಗಿದೆ. ರಾಮಚಂದ್ರಾಪುರಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿದೆ. 5 ದಿನಗಳ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಶಂಕರ ಕಿಂಕರ ಪ್ರಶಸ್ತಿ ಬೀದರ್ ದ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಗಳಿಗೆ ಪ್ರಧಾನವಾಗಲಿದೆ. ಇದು 6ನೇ ವರ್ಷ ಪ್ರಧಾನವಾಗುತ್ತಿದ್ದು ಸಂಸ್ಕೃತ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದ ಮಹನೀಯರಿಗೆ ನೀಡಲಾಗುತ್ತಿದೆ. ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಆರ್ ಎಸ್ ಭಟ್, ಎನ್ ವಿ ಹೆಗಡೆ, ಮಹೇಶ ಚಟ್ನಳ್ಳಿ, ಡಾ. ವೈ,ವಿ ಕೃಷ್ಟಮೂರ್ತಿ ಇನ್ನಿತರ ಪ್ರಮುಖರು ಹಾಜರಿದ್ದರು.