Home Local ಮಾಜಿ ಶಾಸಕ ‌ದಿನಕರ‌ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಕಾರ್ಯಕರ್ತರು.

ಮಾಜಿ ಶಾಸಕ ‌ದಿನಕರ‌ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಕಾರ್ಯಕರ್ತರು.

SHARE

ಕುಮಟಾ: ಎಲ್ಲೆಡೆ‌ ಬಿಜೆಪಿ‌ ಟಿಕೆಟ್ ನಮ್ಮ ಬೆಂಬಲಿಗರಿಗೆ‌ಸಿಗಲೆಂದು ‌ಜನತೆ‌ ದೇವರ ಮೊರೆಹೋಗುತ್ತಿದ್ದಾರೆ. ಹೌದು ಇಂದು ಕುಮಟಾದಲ್ಲಿ ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿಯವರಿಗೆ ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಲೆಂದು ಅವರ ಬೆಂಬಲಿಗರು ದೇವರ ಮೊರೆ ಹೋಗಿದ್ದಾರೆ.

ಕುಮಟಾ ಅಳ್ವೆಕೊಡಿ ದೇವರ್ಸು ನಾಯಕ ಮಹಾಮಾಯಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕ್ಷೇತ್ರದ ಅಭಿವೃದ್ಧಿ ಹಾಗೂ ಜನತೆಯ ಹಿತಕ್ಕಾಗಿ ದಿನಕರ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಉತ್ತಮ . ಬಿಜೆಪಿ ಹೈಕಮಾಂಡ್ ದಿನಕರ‌ ಶೆಟ್ಟಿಯವರ ಬಗ್ಗೆ ಕಳಕಳಿ ಹೊಂದಿ ಅವರಿಗೆ ಟಿಕೆಟ್ ನೀಡಲೆಂದು ಕಾರ್ಯಕರ್ತರು ದೇವರಲ್ಲಿ ಪ್ರಾರ್ಥಿಸಿದರು‌ ಎನ್ನಲಾಗಿದೆ.

ಬಿಜೆಪಿ ೨ ಲಿಸ್ಟ ಗಳನ್ನು ಬಿಡುಗಡೆ ಗೊಳಿಸಿದರೂ ಇನ್ನೂ ಕುಮಟಾ ಹೊನ್ನಾವರ ಕ್ಷೇತ್ತದ ಟಿಕೆಟ್ ಘೋಷಣೆ ಆಗದಿರುವುದು ಜನರ ಕುತೂಹಲ ‌ಕೆರಳಿಸಿದೆ.

ಈ ಸಂದರ್ಭದಲ್ಲಿ ಪ್ರಮುಖ ಕಾರ್ಯಕರ್ತರು, ನೂರಕ್ಕೂ ಹೆಚ್ಚಿನ ಜನರು ಹಾಗೂ ದಿನಕರ ಶೆಟ್ಟಿ ಅಭಿಮಾನಿಗಳು ಹಾಜರಿದ್ದರು.