Home Local ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಕೊಲೆ ಯತ್ನ?

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಕೊಲೆ ಯತ್ನ?

SHARE

ಹಾವೇರಿ : ಇದು ನನ್ನ ಕೊಲೆ ಯತ್ನ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಟ್ವೀಟರ್ ನಲ್ಲಿ ಹೇಳಿದ್ದಾರೆ

ಘಟನೆ ನಡೆದಿದ್ದು ಹೀಗೆ ಶಿರಸಿಯಿಂದ ಬೆಂಗಳೂರಿಗೆ ಕಾರ್ ನಲ್ಲಿ ಅನಂತ್ ಕುಮಾರ್ ಹೆಗೆಡೆ ಹೋಗುತ್ತಿದ್ದಾಗ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ಲಾರಿಯೊಂದು ಏಕಾಏಕಿ ಡಿಕ್ಕಿ ಹೊಡೆಯಲು ನೋಡಿದೆ. ಆದರೆ ಸಚಿವರ ಕಾರು ಕೂದಲೆಳೆ ಅಂತರದಲ್ಲಿ ಪಾಸ್ ಆಗಿದ್ದು, ಬೆಂಗಾವಲು ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಪರಿಣಾಮ ಬೆಂಗಾವಲು ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಎಎಸ್ ಐ ಪ್ರಭು ತಳವಾರ ಕಾಲಿಗೆ ಸಂಪೂರ್ಣ ಗಾಯವಾಗಿದೆ. ಕೂಡಲೇ ಬೆಂಗಾವಲು ಸಿಬ್ಬಂದಿ ಪರಾರಿ ಆಗುತ್ತಿದ್ದ ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಉದ್ದೇಶ ಪೂರ್ವಕವಾಗಿಯೇ ಲಾರಿ ಚಾಲಕ ತಮ್ಮ ಮೇಲೆ ಲಾರಿ ಹರಿಸಲು ನೋಡಿದ ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದೇನೆ ಎಂದು ಟ್ವೀಟರ್ ನಲ್ಲಿ ಹೇಳಿದ್ದಾರೆ.