Home Information ರಾಜ್ಯಮಟ್ಟದ ಸಾಹಿತ್ಯಿಕ ಕಮ್ಮಟ : ಆಸಕ್ತರಿಗೆ ಅವಕಾಶ

ರಾಜ್ಯಮಟ್ಟದ ಸಾಹಿತ್ಯಿಕ ಕಮ್ಮಟ : ಆಸಕ್ತರಿಗೆ ಅವಕಾಶ

SHARE

ಕಾರವಾರ:ಎರಡು ದಿನಗಳ ರಾಜ್ಯಮಟ್ಟದ ಸಾಹಿತ್ಯ ಕಮ್ಮಟ ಕಥಾಯಾನ ಸಾಹಿತ್ಯಕ ಕಾರ್ಯಾಗಾರ ಕೈಗಾ ಅಣುವಿದ್ಯುತ್ ನಿಗಮ ಸಾಮಾಜಿಕ ಜವಾಬ್ದಾರಿ ಘಟಕ ವತಿಯಿಂದ ಕೈಗಾ ವಸತಿ ಸಂಕೀರ್ಣದಲ್ಲಿ ಜೂನ್ 9-10 ರಂದು ನಡೆಸಲು ಯೋಜಿಸಲಾಗಿದೆ.

ಆಸಕ್ತ ಉದಯೋನ್ಮುಖ ಬರಹಗಾರರು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದ್ದು ಆಯ್ಕೆ ಪ್ರಕ್ರಿಯೆ ಮಾನದಂಡವಾಗಿ ಆಸಕ್ತ ಶಿಬಿರಾರ್ಥಿಗಳು ತಮ್ಮ ಇತ್ತಿಚೀನ ಪ್ರಕಟಿತ ಅಥವಾ ಹಸ್ತಪ್ರತಿ ರೂಪದಲ್ಲಿರುವ ಕಥೆ, ಲೇಖನ, ವೈಜ್ಞಾನಿಕ ಬರಹ ಯಾವುದಾದರೂ ಒಂದನ್ನು 750 ಶಬ್ದ ಮಿತಿಯಲ್ಲಿ kathayaana@gmail.com ಗೆ ಮೇ 10 ರ ಒಳಗಾಗಿ ಸಲ್ಲಿಸಲು ಕೋರಲಾಗಿದೆ.

ಈ ಬರಹಗಳನ್ನು ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಾಗಿಯೂ ಗಣಿಸಲಾಗುತ್ತಿದ್ದು ಆಯ್ದ ಮೂರು ಉತ್ತಮ ಬರಹಗಳಿಗೆ ರಾಜ್ಯಮಟ್ಟದ ಪುರಸ್ಕಾರ ನೀಡಲಿದೆ. ಸಮಗ್ರ ಸಾಹಿತ್ಯಿಕ ಬರವಣಿಗೆಯ ತಾಂತ್ರಿಕತೆಯ ಕುರಿತು, ಕಥಾಯಾನ- ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತ್ಯಿಕ ಕಮ್ಮಟ ಡಾ.ಬಿ. ಆರ್. ಲಕ್ಷ್ಮಣರಾವ್, ರೋಹಿತ ಚಕ್ರತೀರ್ಥ, ಡಾ.ಕೆ.ಎನ್. ಗಣೇಶಯ್ಯ, ಪತ್ರಕರ್ತ ಗಂಗಾಧರ ಹಿರೇಗುತ್ತಿ, ಡಾ. ನಿರಂಜನ ವಾನಳ್ಳಿ, ಉದಯಶಂಕರ ಪುರಾಣಿಕ, ಸಂತೋಷಕುಮಾರ ಮೆಹೆಂದಳೆ, ಬಿ.ಎನ್.ವಾಸರೆ, ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂತೋಷಕುಮಾರ ಮೆಹೆಂದಳೆ-9480842680 ಸಂಪರ್ಕಿಸಲು ಕೋರಲಾಗಿದೆ.