Home Local ನಾಳೆ ಹೊನ್ನಾವರದಲ್ಲಿ ಶ್ರೀ ಶಂಕರಭಗವತ್ಪಾದ ಜಯಂತ್ಯುತ್ಸವ.

ನಾಳೆ ಹೊನ್ನಾವರದಲ್ಲಿ ಶ್ರೀ ಶಂಕರಭಗವತ್ಪಾದ ಜಯಂತ್ಯುತ್ಸವ.

SHARE

ಹೊನ್ನಾವರ: ಶ್ರೀ ಶಂಕರಭಗವತ್ಪಾದ ಜಯಂತ್ಯುತ್ಸವ ಪಟ್ಟಣದ ರಥಬೀದಿಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಎ.20 ರಂದು ಸಂಜೆ 6ಗಂಟೆಗೆ ನಡೆಯಲಿದೆ.ಕರ್ಕಿ ಶ್ರೀ ಕ್ಷೇತ್ರ ಶ್ರೀಜ್ಞಾನೇಶ್ವರೀ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು, ಹಳದೀಪುರ ಶ್ರೀಕೃಷ್ಣಾಶ್ರಮ ಮಠದ ಶ್ರೀ ವಾಮನಾಶ್ರಮ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು.

ಅಂದು ಬೆಳಿಗ್ಗೆ ಪಟ್ಟಣದ ರಾಯಲಕೇರಿ ಶ್ರೀ ಶಕ್ತಿಪಂಚಾಯತನ ದೇವಾಲಯದಲ್ಲಿ ಚತುಷ್ಪದೀ ಮಂತ್ರಾನುಷ್ಠಾನ ಪರಿಷತ್ತಿನ ಸಹಯೋಗದೊಂದಿಗೆ ರುದ್ರಹವನಾದಿಗಳು ಮತ್ತು ಸಂಜೆ ಭಗವತ್ಪಾದ ಶಂಕರರ ಪಲ್ಲಕ್ಕಿ ಉತ್ಸವ ಶ್ರೀ ಗಣಪತಿ ದೇವಸ್ಥಾನದಿಂದ ಶ್ರೀ ವೆಂಕಟ್ರಮಣ ದೇವಸ್ಥಾನ ಮೂಲಕ ಪುನ: ಶ್ರೀ ಗಣಪತಿ ದೇವಸ್ಥಾನಕ್ಕೆ ಆಗಮಿಸಲಿದೆ ಎಂದು ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಎಂ.ಜಿ.ನಾಯ್ಕ, ಪ್ರಧಾನ ಕಾರ್ಯದರ್ಶಿ ಎಂ.ಡಿ.ನಾಯ್ಕ, ಕೋಶಾಧ್ಯಕ್ಷ ಸತ್ಯನಾರಾಯಣ ಪಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.