Home Local ಶಶಿಭೂಷಣ ಹೆಗಡೆಯವರಿಗೆ ಸಿಕ್ಕಿತು ಬಲ: ಜೆಡಿಎಸ್ ಸೇರ್ಪಡೆಯಾದ ದಿವಸ್ಪತಿ ನಾಯ್ಕ.

ಶಶಿಭೂಷಣ ಹೆಗಡೆಯವರಿಗೆ ಸಿಕ್ಕಿತು ಬಲ: ಜೆಡಿಎಸ್ ಸೇರ್ಪಡೆಯಾದ ದಿವಸ್ಪತಿ ನಾಯ್ಕ.

SHARE

ಸಿದ್ದಾಪುರ:ತಾಲೂಕಿನ ಜಾತ್ಯತೀತ ಜನತಾದಳದ ಕಾರ್ಯಾಲಯದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರು, ನಾಮದಾರಿ ಸಮಾಜದ ಪ್ರಮುಖರಾದ ದಿವಸ್ಪತಿ ನಾಯ್ಕ ಸಿದ್ದಾಪುರ ತಾಲುಕ ಬಿಜೆಪಿ ಕಾರ್ಯದರ್ಶಿ ಅವರು, ಬಿಜೆಪಿ ಯನ್ನು ತೊರೆದು,  ಸೊರಬದ ಶಾಸಕರಾದ ಮಧು ಬಂಗಾರಪ್ಪ  ಹಾಗೂ   ಡಾ.ಶಶಿಭೂಷಣ ಹೆಗಡೆಯವರ   ನಾಯಕತ್ವವನ್ನು ಒಪ್ಪಿ, ಜಾತ್ಯತೀತ ಜನತಾದಳವನ್ನು ಸೇರಿದರು.

ರಾಜ್ಯ ಹಿಂದುಳಿದ ವಿಭಾಗದ ಉಪಾಧ್ಯಕ್ಷರಾದ ತಿಮ್ಮಪ್ಪ ಮಡಿವಾಳ, ಹಾಗೂ ತಾಲೂಕಾ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತಾನಾಡಿದ ದಿವ್ಯಸ್ಪತಿ ನಾಯ್ಕ ಅವರು ನಾವೆಲ್ಲ ದಿವಂಗತ ಬಂಗಾರಪ್ಪ ಅವರ ಅನುಯಾಯಿಗಳು, ಈಗ ಅವರ ಮಗ ಸೊರಬದ ಶಾಸಕ ಮಧು ಬಂಗಾರಪ್ಪ ಅವರ ನಾಯಕತ್ವದಲ್ಲಿ ಜೆಡಿ ಎಸ್ ನಲ್ಲಿ ಕೆಲಸ ಮಾಡುತ್ತೆವೆ, ಯಾವದೆ ಜಾತಿ ಮತದ ಸಂಘಟನೆ ಮೇಲೆ ರಾಜಕೀಯ ಮಾಡದೆ ಪಕ್ಷದಲ್ಲಿ ಶ್ರಮಿಸಿ ಶಶಿಭೂಷಣ ಅವರ ಗೆಲ್ಲಿಸುತ್ತೆವೆ ಎಂದರು

ಅವರನ್ನು ಈ ಸಂದರ್ಭದಲ್ಲಿ ಜಿಲ್ಲಾ ರೈತಮೊರ್ಚದ ಜಿಲ್ಲಾ ಕಾರ್ಯದರ್ಶಿ ಯನ್ನಾಗಿ ಜಿಲ್ಲಾಧ್ಯಕ್ಷರ ಅನುಮೋದನೆ ಮೆರೆಗೆ ನೇಮಿಸಲಾಯಿತು.