Home Local ಸಿದ್ದಾಪುರದ ಬಾನ್ಕುಳಿ ಮಠದಲ್ಲಿ ನಡೆಯುತ್ತಿದೆ ‘ಶಂಕರ ಪಂಚಮಿ’

ಸಿದ್ದಾಪುರದ ಬಾನ್ಕುಳಿ ಮಠದಲ್ಲಿ ನಡೆಯುತ್ತಿದೆ ‘ಶಂಕರ ಪಂಚಮಿ’

SHARE

ಸಿದ್ಧಾಪುರ: ಆದಿಗುರು ಶಂಕರಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ಶ್ರೀರಾಮದೇವ ಭಾನ್ಕುಳಿ ಮಠದಲ್ಲಿ ನಡೆಯುತ್ತಿರುವ ಶಂಕರ ಪಂಚಮೀ ಉತ್ಸವವು ನಿನ್ನೆಯಿಂದ ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ಶುಭಾರಂಭಗೊಂಡಿದ್ದು ಇಂದು ಶ್ರೀಕರಾರ್ಚಿತ ಪೂಜೆ, ಅತಿರುದ್ರ ಪುರಶ್ಚರಣಾಂಗ ರುದ್ರಜಪ, ಕಾಮಧೇನು ಹವನ, ನವಚಂಡಿ ಹವನ, ಮಾತೆಯರಿಂದ ಕುಂಕುಮಾರ್ಚನೆ ಮತ್ತು ಭಜನೆ, ಇನ್ನಿತರ ಧಾರ್ಮಿಕ
ವಿಧಿ ವಿಧಾನಗಳು ನೆರವೇರಿತು.

ಮಧ್ಯಾಹ್ನ ಶಂಖನಾದ ಗುರುವಂದನೆಯೊಂದಿಗೆ ಇಂದಿನ ಸರ್ವಸೇವಾ ಕರ್ತರಾದ ಶ್ರೀ ವಿನಾಯಕ‌ ಸುಬ್ರಾಯ ಹೆಗಡೆ ಮತ್ತು ಸಹೋದರರು ಹರಗಿ ಇವರಿಂದ ಫಲಸಮರ್ಪಣೆ ನಡೆಯಿತು.

ಇಂದಿನ ದಿನ ರುದ್ರಜಪ‌ ಪಠಿಸಿದವರಿಗೆ ಹಾಗೂ ಪ್ರಾಯೋಜಕರಿಗೆ ಶ್ರೀಗಳವರು ಮಂತ್ರಾಕ್ಷತೆಯನ್ನು ಅನುಗೃಹಿಸಿದರು.
ವಿಶೆಷ ವಾಗಿ‌ ಭಾಲಚಂದ್ರ.ಕೆ‌. ಹೆಗಡೆ ಮತ್ತು ಶ್ರೀಮತಿ ಸ್ವರ್ಣರೇಖಾ ಕೆಶಿನಮನೆ ಸಿರಸಿ ಇವರು ಗುರುಕುಲಕ್ಕೆ ಶಿಕ್ಷಕರ ಒಂದು ಕೊಠಡಿಯ ಮೊತ್ತವನ್ನು ಸಮರ್ಪಣೆ ಮಾಡಿದರು.

ಹಾಗೆಯೆ ಗೋಸ್ವರ್ಗ ಕ್ಕೆ
ಶ್ರೀಮತಿ‌ ಶಂಕರಿಅಮ್ಮ ಮತ್ತು ಮಗ ಡಾ|| ರಾಧಾಕೃಷ್ಣ. ಡಿ. ಎಸ್ ಸುಳ್ಯ ವಲಯ ೫೦೦೦೫
ಎಸ್ ಭಾಸ್ಕರ ಶರ್ಮಾ ಸಂಪತ್ತಿಲ್ ಮನೆ ಈಶ್ವರಮಂಗಲ ವಲಯ ೬೦೦೫
ಶ್ರೀಮತಿ ಭಾನುಮತಿ ಇವರು‌ ಮಗಳ ಸ್ಮರಣೆಗಾಗಿ ೧೧೦೧
ಸಿದ್ದಾಪುರ ಮಂಡಲ ಇಟಗಿ ವಲಯದ ಲಕ್ಷ್ಮೀನಾರಾಯಣ ಹೆಗಡೆ ದಂಪತಿಗಳ ಮಗಳು ಪೂಜಾ ಹೆಗಡೆ ತನ್ನ ಬಂಗಾರದ ಕಿವಿಯ ಓಲೆ ಯೊಂದಿಗೆ ದುಡಿಮೆಯ ೫೦೦೦ ವನ್ನು ಶ್ರೀಸಂಸ್ಥಾನಕ್ಕೆ ಸಮರ್ಪಿಸಿದರು.

ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ನವಚಂಡಿ ಯಾಗದ ಪೂರ್ಣಾಹುತಿ ಸಂಪನ್ನಗೊಂಡಿತು

ಸಾಯಂಕಾಲ ‘ರಂಗಸೌಗಂಧ’ ವಡ್ಡಿನಗದ್ದೆ ಸಿದ್ದಾಪುರ ಇವರಿಂದ ‘ಪ್ರಚಂಡ ಕೌಶಿಕ’ ಪೌರಾಣಿಕ‌ನಾಟಕ ಪ್ರಾರಂಭಗೊಂಡಿತು.

ಇಂದು ಹೆಚ್ಚಿನ ಸಂಖ್ಯೆಯ ಶಿಷ್ಯರು ಸೇವಾ ಕಾರ್ಯದಲ್ಲಿ ಭಾಗವಹಿಸಿ ವ್ಯವಸ್ಥೆಯನ್ನು ಚಂದಗಾಣಿಸಿಕೊಟ್ಟು ಗುರುದೇವತಾನುಗೃಹಕ್ಕೆ ಪಾತ್ರರಾದರು.

ರುದ್ರಜಪದೊಂದಿಗೆ ಪುರುಷಸೂಕ್ತ ಮತ್ತು ಶ್ರೀಸೂಕ್ತ ಹವನವು ನಡೆದವು ವಿಶೆಷವಾಗಿ ಸಾಯಂಕಾಲ ೫:೩೦ ರಿಂದ ಶ್ರೀಸಂಸ್ಥಾನದವರೆ ನಡೆಸಿಕೊಡುವ “ವೇದಪದ”* ಕಾರ್ಯಕ್ರಮ ಜರುಗುವುದು.