Home Uncategorized ದಿನಕರ ಶೆಟ್ಟಿಯವರಿಗೆ ತಟ್ಟಲಿದೆಯೇ ಬಂಡಾಯದ ಬಿಸಿ?

ದಿನಕರ ಶೆಟ್ಟಿಯವರಿಗೆ ತಟ್ಟಲಿದೆಯೇ ಬಂಡಾಯದ ಬಿಸಿ?

SHARE

ಕುಮಟಾ: ಬಹುನಿರೀಕ್ಷಿತ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಶಾಸಕರು ಹಾಗೂ ಜೆಡಿಎಸ್ ತೊರೆದು ಬಿಜೆಪಿಗೆ ಪಾದಾರ್ಪಣೆ ಮಾಡಿ ಬಿಜೆಪಿ ಮುಖಂಡರೆಂದು ಗುರುತಿಸಿಕೊಂಡ ದಿನಕರ ಶೆಟ್ಟಿ ಅವರ ಪಾಲಾಗಿದೆ . ಇದು ದಿನಕರ ಶೆಟ್ಟಿ ಬೆಂಬಲಿಗರಿಗೆ ಸಂತಸ ಉಂಟು ಮಾಡಿದೆ .

ತ್ರಿಕೋನ ಸ್ಪರ್ಧೆ ಏರ್ಪಡುವ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಕುಮಟಾ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕಿ ಶಾರದಾ ಶೆಟ್ಟಿ ತಮ್ಮ ಅದೃಷ್ಟ ಪರೀಕ್ಷೆಗೆ ಮತ್ತೆ ಪ್ರಯತ್ನ ಮುಂದುವರಿಸಿದ್ದಾರೆ. ಅದೇ ರೀತಿ ಜೆಡಿಎಸ್ ನಿಂದ ಪ್ರಬಲ ಸ್ಪರ್ಧಾಳುವಾಗಿ ಪ್ರದೀಪ ನಾಯಕ ದೇವರಬಾವಿ ಗುರುತಿಸಿಕೊಂಡಿದ್ದಾರೆ .ಇದೀಗ ಬಿಜೆಪಿ ಟಿಕೆಟ್ ಅನೌನ್ಸ್ ಆಗಿದ್ದು ದಿನಕರ್ ಶೆಟ್ಟಿ ಬಿಜೆಪಿಯಿಂದ ಚುನಾವಣಾ ಕಣದಲ್ಲಿ ಧುಮುಕಿದ್ದಾರೆ .

ಕೊನೆಯ ಹಂತದಲ್ಲಿ ತಮ್ಮೆಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ದಿನಕರ ಶೆಟ್ಟಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ದಿನಕರ ಶೆಟ್ಟಿ ಅವರಿಗೆ ಬಂಡಾಯದ ಬಿಸಿ ತಟ್ಟಲಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿ‌ ಮೂಡುತ್ತಿದೆ.

ಹೌದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪ್ರಬಲತೆ ಯಲ್ಲಿ ಸೂರಜ ನಾಯ್ಕ ಹಾಗೂ ಯಶೋಧರ ನಾಯ್ಕ ಕೂಡ ಇದ್ದರು .ತಮ್ಮದೇ ಅಭಿಮಾನಿ ಬಣ ಹಾಗೂ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಸೂರಜ್ ನಾಯ್ಕ ಸೋನಿ ಪ್ರಬಲ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಹೆಚ್ಚಿನದಾಗಿ ಗುರುತಿಸಿಕೊಂಡಿದ್ದರು . ತಮ್ಮದೇ ಆದ ಕಾರ್ಯ ವೈಖರಿ ಹಾಗೂ ಜನಸೇವೆ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಯಶೋಧರ ನಾಯ್ಕ ಕೂಡ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದು ಗುರುತಿಸಿಕೊಂಡಿದ್ದರು .

ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿಯವರಿಗೆ ಟಿಕೆಟ್ ನೀಡಿರುವುದು ಉಳಿದ ಪ್ರತಿಸ್ಪರ್ಧಿಗಳ ಬೆಂಬಲಿಗರನ್ನು ಕೆಂಡಾಮಂಡಲವಾಗಿಸಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ . ಹೀಗಾಗಿ ದಿನಕರ ಶೆಟ್ಟಿಯವರಿಗೆ ಬಂಡಾಯದ ಬಿಸಿ ತಟ್ಟಲಿದೆಯೇ ಎಂಬ ಪ್ರಶ್ನೆ ಈಗ ಎಲ್ಲರ ಮನದಲ್ಲಿ ಮೂಡಿದೆ.

ದಿನಕರ್ ಶೆಟ್ಟಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ ಎಂಬ ವಿಷಯ ತಿಳಿದ ನಂತರದಲ್ಲಿ ಯಶೋಧರ ನಾಯ್ಕ ಬಂಡಾಯದ ಬಾವುಟ ಹಾರಿಸಿ ಅವರ ಕಾರ್ಯಕರ್ತರ ಸಭೆ ನಡೆಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು .ಈ ಎಲ್ಲ ವಿಷಯಗಳನ್ನು ಗಮನಿಸಿದಾಗ ಯಾವ ದಿಕ್ಕಿನಲ್ಲಿ ಈ ಚುನಾವಣಾ ಕಣ ಸಾಗಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಒಟ್ಟಾರೆಯಾಗಿ ದಿನಕರ ಶೆಟ್ಟಿ ಅವರ ಜೊತೆಗೆ ತೀವ್ರವಾಗಿ ಪ್ರತಿಸ್ಪರ್ಧಿಯಾಗಿದ್ದ ಟಿಕೆಟ್ ಆಕಾಂಕ್ಷಿಗಳು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ .