Home Local ಭೀಮಣ್ಣ ನಾಯ್ಕ ಪರವಾಗಿ ನಡೆಯುತ್ತಿದೆ ಭಾರೀ ಪ್ರಚಾರ.

ಭೀಮಣ್ಣ ನಾಯ್ಕ ಪರವಾಗಿ ನಡೆಯುತ್ತಿದೆ ಭಾರೀ ಪ್ರಚಾರ.

SHARE

ಶಿರಸಿ: ತಾಲೂಕಿನ ದೇವನಳ್ಳಿ ಪಂಚಾಯತ ದ ವ್ಯಾಪ್ತಿಯಲ್ಲಿ ಶಿರಸಿ ಬ್ಲಾಕ್ ಉಪಾಧ್ಯಕ್ಷ ಎನ್ ವಿ ವೈದ್ಯರ ಮುಖಂಡತ್ವದಲ್ಲಿ ಚುನಾವಣಾ ಪ್ರಚಾರ ಮಾಡಲಾಯಿತು.

ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರವಾಗಿ ಮತದಾರರ ಮನವೊಲಿಕೆ ಮಾಡಿ ಮತದಾನ ಮಾಡುವಂತೆ ಪ್ರೇರೇಪಿಸಲಾಯಿತು.ರಾಜ್ಯ ಸರಕಾರದ ಸಾಧನೆಗಳ ಕೈಪಿಡಿ ನೀಡಿ ಜಾರಿಗೊಳಿಸಿದ ಯೋಜನೆಗಳ ಮಾಹಿತಿ ನೀಡಿ ಸೌಲಭ್ಯಗಳನ್ನು ‌ಪಡೆದುಕೊಂಡ ಮಾಹಿತಿ ಸಂಗ್ರಹಿಸಿ ಕಾಂಗ್ರೆಸ್ ಪರವಾಗಿ ಬೆಂಬಲ ನೀಡಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ‌ಜಿ ವಿ ವೈದ್ಯ,ಮೋಹನ ಸಿದ್ದಿ, ಗಿಡ್ಡ ಗೌಡ, ಮಂಜುನಾಥ ವೈದ್ಯ, ನಾಗಪತಿ ಹೆಗಡೆ, ಸುರೇಶ ಗೌಡ ಮುಂತಾದವರು ಪಾಲ್ಗೊಂಡಿದ್ದರು.