Home Local 23ಕ್ಕೆ ಶಾರದಾ ಶೆಟ್ಟಿ ನಾಮಪತ್ರ ಸಲ್ಲಿಕೆ: 26 ಕ್ಕೆ ರಾಹುಲ್ ಗಾಂಧಿ ಕುಮಟಾಕ್ಕೆ!

23ಕ್ಕೆ ಶಾರದಾ ಶೆಟ್ಟಿ ನಾಮಪತ್ರ ಸಲ್ಲಿಕೆ: 26 ಕ್ಕೆ ರಾಹುಲ್ ಗಾಂಧಿ ಕುಮಟಾಕ್ಕೆ!

SHARE

ಕುಮಟಾ: ಬ್ಲಾಕ್ ಕಾಂಗ್ರೆಸ್ ಕುಮಟಾ ಇವರ ವತಿಯಿಂದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿ ದಿನಾಂಕ 23/04/2018 ರ ಬೆಳಿಗ್ಗೆ 11.00 ಘಂಟೆಗೆ ಅಭ್ಯರ್ಥಿಯಾಗಿರುವ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾಸ್ತಿಕಟ್ಟೆ ಮಹಾಸತಿ ದೇವರಿಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಲಾಯಿತು.

ಅದರಂತೆ ದಿನಾಂಕ 26/04/2018 ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಯುತ ರಾಹುಲ್ ಗಾಂಧಿಯವರು ಆಗಮಿಸಿ ಹಿರೇಗುತ್ತಿ,ಮಿರ್ಜಾನ್ ಹಾಗೂ ಕುಮಟಾ ಮಾಸ್ತಿಕಟ್ಟೆಯಿಂದ ಗಿಬ್ ಹೈಸ್ಕೂಲ್ ವರೆಗೆ ರೋಡ್ ಸೋ ನಡೆಸುವುದರಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶುಭ ಕೋರಬೇಕೆಂದು ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು, ಶ್ರೀ ರತ್ನಾಕರ ನಾಯ್ಕ, ಬ್ಲಾಕ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ತಾರಾ ಗೌಡ, ಯುವ ಮುಖಂಡರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿ, ಶ್ರೀಮತಿ ಸುರೇಖಾ ವಾರೆಕರ,ಪುರಸಭೆ ಕುಮಟಾ ಅಧ್ಯಕ್ಷರಾದ ಶ್ರೀ ಮಧುಸೂದನ ಶೆಟ್,ಶ್ರೀ ಮೈಕಲ್ ರೊಡ್ರೀಗೀಸ್ ಹಾಗೂ ವಿವಿಧ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.