Home Local ಪಕ್ಷದ ವರಿಷ್ಠರ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ ಎಂದು ಪಕ್ಷ ನಿಷ್ಟೆ ಮೆರೆದ ನಾಗರಾಜ ನಾಯಕ ತೊರ್ಕೆ

ಪಕ್ಷದ ವರಿಷ್ಠರ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ ಎಂದು ಪಕ್ಷ ನಿಷ್ಟೆ ಮೆರೆದ ನಾಗರಾಜ ನಾಯಕ ತೊರ್ಕೆ

SHARE

ಕುಮಟಾ: ಪ್ರಧಾನಿ ನರೇಂದ್ರ ಮೋದಿಯವರ ತತ್ವಾದರ್ಶಗಳಿಂದ ಆಕರ್ಷಿತನಾಗಿ ಬಿ.ಜೆ.ಪಿ. ಪಕ್ಷಕ್ಕೆ ಸೇರ್ಪಡೆಗೊಂಡು ನನ್ನ ಸಾಮಾಜಿಕ ಕಳಕಳಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಎಲ್ಲಾ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನರಿಗೆ ಪ್ರಾಮಾಣ ಕವಾಗಿ ತಲುಪಿಸುವ ಉದ್ದೇಶ ಹೊಂದಿದ್ದೇನೆ. ಅಂತೆಯೇ ನಾನು ಕೂಡಾ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಪಕ್ಷದ ಒಬ್ಬ ಟಿಕೆಟ್ ಆಕಾಂಕ್ಷಿಯಾಗಿ ಜನರಿಗೆ ಇನ್ನೂ ಹೆಚ್ಚಿನ ಅನೂಕೂಲತೆಗಳನ್ನು ಒದಗಿಸುವ ಆಕಾಂಕ್ಷಿಯನ್ನು ಹೊಂದಿದ್ದೆ.

ಆದರೆ ಇದೀಗ ಬಿ.ಜೆ.ಪಿ ವರಿಷ್ಠರ ಆಶಯದಂತೆ ಶ್ರೀಯುತ ದಿನಕರ ಶೆಟ್ಟಿಯವರಿಗೆ ಪಕ್ಷದಿಂದ ಟಿಕೆಟ್ ದೊರೆತಿದ್ದು ನಮ್ಮೆಲ್ಲ ನಾಯಕರ ನಿರ್ಣಯವನ್ನು ನಾನು ಗೌರವಿಸುತ್ತೇನೆ. ಪಕ್ಷದ ಧ್ಯೇಯೋದ್ದೇಶಗಳನ್ನು ಪಾಲಿಸುತ್ತಾ ಈ ಬಾರಿಯ ನಮ್ಮ ಪಕ್ಷದ ಅಭ್ಯರ್ಥಿ ಶ್ರೀಯುತ ದಿನಕರ ಶೆಟ್ಟಿ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸುತ್ತಾ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಬಿ.ಜೆ.ಪಿ ಅಭ್ಯರ್ಥಿಯನ್ನೇ ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆ. ನನಗೆ ವ್ಯಕ್ತಿಗಿಂತ ಪಕ್ಷವೇ ಮುಖ್ಯವಾಗಿದ್ದು ಪಕ್ಷದ ವರಿಷ್ಠರ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ ಎಂದು ನಾಗರಾಜ ನಾಯಕ ತೊರ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.