Home Article ಕಳೆದುಹೋದ ಎಳೆಯ ದಿನಗಳು ( ಭಾಗ ೯)

ಕಳೆದುಹೋದ ಎಳೆಯ ದಿನಗಳು ( ಭಾಗ ೯)

SHARE

ಲೇಖಕರು: ಶ್ರೀ ತಿಗಣೇಶ ಮಾಗೋಡು.

ನಮಸ್ಕಾರ..ನಾನು ನೆನಪಿಸುವ ಬಾಲ್ಯದ ದಿನಗಳು ತಮ್ಮದೆಂದು ತಿಳಿದು ಓದುವ ಎಲ್ಲ ನನ್ನವರಿಗೆ ರಜೆಯ ದಿನದಲ್ಲಿಯೂ ವಂದನೆಗಳು..

ಆಗ ಎಲ್ಲರ ಮನೆಯಲ್ಲಿಯೂ ಕಟ್ಟಿಗೆ ಒಲೆಯೇ..ಬತ್ತಿಯ ಸ್ಟೋ..ವಿಶೇಷ..ಪಂಪಿನ ಸ್ಟೋವ್..ಎಲ್ಲೋ ಊರಿಗೊಂದು..ನಾವೂ ಸೌದಿ ಕುಂಟೆ ತಂದವರೇ..ಕಲ್ಲರೆ ಬೋಳೆ ಹತ್ತಿದರೆ..ಎಷ್ಟುಬೇಕು ಕುಂಟೆ..ಆಗ ಕಾಂಗ್ರೆಸ್ಗಿಡಗಳು ಕಡಿಮೆ..ಗುರ್ಗೆ ಸಪ್ಪು ಬೇಕಾದಷ್ಟು ಇತ್ತು..ಗಂಟಿ ಮೇಯಲು ಹೋದಾಗ ಹುಲಿ ಹಿಡಿಯುತ್ತಿತ್ತು..ಅದಕ್ಕಾಗಿ ಗಂಟಿ ಕಾಯುತ್ತಿದ್ದರು..ಮಳೆಗಾಲದಲ್ಲಿ ಬಿಳಿಗುರ್ಗೆ ಬೇರು ಲಡ್ಡಾಗಿದ್ದು..ರಾತ್ರಿಹೊಳೆಯುತ್ತಿತ್ತು..ಅದು ರೇಡಿಯಮ್ ಥರ.ಪಟಾಕಿ ಗಿಡಗಳು ಎಲ್ಲೆಲ್ಲೂ..ನಾವು ಅದನ್ನು ಹಣೆಗೆ ಬಡಿದು..’ಚಟ್’ ಎನ್ನುವ ಸಪ್ಪಳ ಬಂದೊಡನೆ ಖುಷಿ ಪಡುತ್ತಿದ್ದೆವು..ಅದರ ಎಲೆ ರಂದು ಪುಸ್ತಕದಲ್ಲಿ ಇಡುತ್ತಿದ್ದೆವು
ಆ ಎಲೆಗೆ ಗಿಡ ಮೂಡುತ್ತಿತ್ತು.

ಆಗ ನಮ್ಮೂರಲ್ಲಿ ನವಿಲುಗಳಿಲ್ಲ..ಜೋಗಿಗಳು ಬಂದಾಗ ಅವರ ಹತ್ತಿರ ತಗೊಂಡ ನವಿಲುಗರಿ ಪುಸ್ತಕದಲ್ಲಿಟ್ಟು ಮರಿಹಾಕುವುದೆಂದು ಕಾಯುತ್ತಿದ್ದೆವು..ಜುಮ್ಮನ ಕಾಯಿ..ಕಾರೆ ಕಾಯಿ ಆಯಿತೆಂದರೆ ಪೆಟ್ಳೆಂಡೆ ಆಟ ಆಡುತ್ತಿದ್ದೆವು..ಅದಕ್ಕಾಗಿ ಗಂಟಿಕಾಯುವವರ ಬೆನ್ನಿಗೆ ನಮ್ಮ ರವಿವಾರ ಕಳೆಯುತ್ತಿತ್ತು..ವಾಟೆ ಅಂಡೆ ಪೀಪಿ ಮಾಡುವಲ್ಲಿ ಕೂಸಗೌಡನ ಮನೆ ಈಶ್ವರ ಎಕ್ಸಪರ್ಟ..ಪೀಪಿ ಮಾಡಿ..ಊಸಿನೋಡಿ..ನೀರಲ್ಲಿ ತೊಳೆದು ಕೊಡುತ್ತಿದ್ದರು..ಗದ್ದೆಕೊಯ್ದಾಗ ..ಕೆಯ್ ಬುಡ ಸೊಗೆದು ಅದರ ಪೀಪಿ..ಹಸಿ ಮಡ್ಳವಾಲೆಯಿಂದ ಪೀಪಿ..ಕುಂಟನೇರಳೆ ಎಲೆಯ ಪೀಪಿ..ಎಲ್ಲ ವಾದ್ಯ ಬಾರಿಸುವ ಕಲಾವಿದರು ನಾವು..ಈಗಲೂ ಒಂದು..ಹಳೆಯ ವಾದ್ಯ ನೆನಪಿದೆ..ಹಿತ್ತಾಳೆ ತಪ್ಪಲೆಯಲ್ಲಿ ನೀರು ತುಂಬಿ..ಅದರ ಒಳಗೆ ಎರಡು ಬದಿಗೆ ಗಚ್ಚಾಗುವ ಹಾಗೆ..ಹೊಕ್ಕಿಸಿ..ತಪ್ಪಲೆಯ ನೀರು ಹಾಕಿ ಉಜ್ಜಿದರೆ ..ಪೇ….ಎನ್ನುವ ಪೀಯನ್ನ ಸಪ್ಪಳ..ಅದನ್ನು ಉಜ್ಜುತ್ತ..ಅದರ ಶ್ರುತಿಯ ಮೇಲೇ ಯಕ್ಷಗಾನ ಭಾಗವತ್ಗೆ ಮಾಡಿದ ನೆನಪಿದೆ.ಚಂಡಪುಳೆಗೆ ಹಿಡಿಕಡ್ಡಿ ಬಗ್ಗಿಸಿ ಹೆಟ್ಟಿ ಅದಕ್ಕೆ ಅಡ್ಡ ಕಡ್ಡಿ ಹಾಕಿ ತಿರುಗಿಸಿ..ಎಲೆ ತುಂಡು ಮಾಡುವ ಮಿಷನ್ ಮಾಡುತ್ತಿದ್ದೆವು.ಒಂದು ಬಾಟ್ಳೆ ಮುಚ್ಚಲು ಸಿಕ್ಕಿದರೆ ಸಾಕು..ಅದನ್ನು ಕನ್ನು ಮಾಡಿ ಅಂಗಿ ಬಟ್ಟಣ್ಣ ಹರಿದು..ಜಡೆಯ ರಬ್ಬರ್ ಕದ್ದು..ಜೋಡಿಸಿ..ಕಿರ್..ಎನ್ನುವ ಗೌಜು ಬರುವ ಆಟಿಕೆ ರೆಡಿ..ಅದೇ ಮುಚ್ಚಳಿಗೆ ಎರಡು ಕನ್ನು ಮಾಡಿ ದಾರ ಸುರಿದು ಎರಡು ಕೈ ಬೆರಳಿಗೆ ಅಇಕ್ಕಿಸಿ ಗಿರಿಗಿಟ್ಟಿ ಆಡಿದವರು..ಅದೇ ಮುಚ್ಚಳಕ್ಕೆ ಒಂದೇ ಒಂದೇ ಕನ್ನು ಮಾಡಿ ಹಿಡಿಕಡ್ಡಿ ಹೊಕ್ಕಿಸಿ ಗಿರಿಗಿಟ್ಟಿ ಮಾಡಿ ನೆಲಕ್ಕೆ ಬಿಟ್ಟುಆಡಿದವರು.

ಹಾಳೆಸೋಗೆಯ ಮೇಲೆ ಕುಳಿತು ಕರಡದ ಬೇಣದಲ್ಲಿ ಆಡಿದವರು..ಎರಡು ಚಕ್ರದ ಗಾಡಿಯ ಮೇಲೆ ಕುಳಿತು ಎಳೆಸಿಕೊಂಡವರು…ಆಗ ನಮ್ಮೂರು ಸೈಕಲ್ ಕಂಡಿರಲಿಲ್ಲ..ನೀರಿನಜೊಟ್ಟೆ.. ರಟ್ಟೆಯ ಗಾಡಿಗಳೇ ಆಳುತ್ತಿದ್ದವು..ಸರಕಾರ ಸೈಕಲ್ಲಿಗೆ ಸಾಲ ಕೊಟ್ತು..ತಿಪ್ಪಯ್ಯನ ಮನೆ ಗಣಪಯ್ಯ..ಹೋಟನ ಮನೆ ನಾರಣ..ಎರಡು ಸೈಕಲ್ಲ ಮಂಜೂರಿಯಾಯ್ತು..ನಾರಣನ ಹೆಸರಿನ ಸೈಕಲ್ಲನ್ನು..ನರಸಿಂಹಪ್ಪಚ್ಚಿ ತೆಗೆದುಕೊಂಡ.
ಅಲ್ಲಿಗೆ ಊರು ಗಾಳಿತುಂಬಿದ ಚಕ್ರ ಕಂಡಿತು..ಅದೇ ಚಕ್ರಗಳು ದೊಡ್ಡದಾಗುತ್ತಾ..ದಪ್ಪವಾಗುತ್ತಾ..ಎರಡು ನಾಲ್ಕಾಗುತ್ತಾ.. ಚಕ್ರವನ್ನೇ ನಂಬಿದೆ.ಇಂದು ಇಡೀ ಊರೇ ನಡೆಯುವುದು ಮರೆತಿದೆ..ತಿಗಣೇಶನೂ ಚಕ್ರದ ಮೇಲೇ..ಆದರೆ ನಡೆ ನೆನಪಿದೆ.

ಮುಂದಿನ ವಾರದ ವರೆಗೆ ಚಕ್ರದ ಮೇಲೆ ಬಾಲ್ಯದತ್ತ ಪಯಣಿಸಿ.

……ನಿಮ್ಮ ತಿಗಣೇಶನೊಂದಿಗೆ