Home Local ಬಿಜೆಪಿ ಬಲಪಡಿಸಲು ದಿನಕರ ಶೆಟ್ಟಿಯವರನ್ನು ಗೆಲ್ಲಿಸಲು ಪ್ರೋ, ಎಂ ಜಿ ಭಟ್ಟ ಕರೆ

ಬಿಜೆಪಿ ಬಲಪಡಿಸಲು ದಿನಕರ ಶೆಟ್ಟಿಯವರನ್ನು ಗೆಲ್ಲಿಸಲು ಪ್ರೋ, ಎಂ ಜಿ ಭಟ್ಟ ಕರೆ

SHARE

ದಿನದಿಂದ ದಿನಕ್ಕೆ ಬಿಜೆಪಿ ಪಕ್ಷದೊಳಗೆ ಅಭ್ಯರ್ಥಿ ದಿನಕರ ಶೆಟ್ಟಿಯವರಿಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದ್ದು ಪಕ್ಷದ ಇನ್ನೋರ್ವ ಯುವಧುರೀಣ ಪೋ‌.ಎಂ ಜಿ ಭಟ್ ದಿನಕರ ಶೆಟ್ಟರ ಗೆಲುವಿಗೆ ಪಣತೊಟ್ಟು ಶ್ರಮಿಸುವುದಾಗಿ ಹೇಳಿದ್ದಾರೆ.

ಹಿಂದೂ ಪರ ಸಂಘಟನೆಯಾದ ಭಜರಂಗದಳವ ,ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಸಕ್ರೀಯ ಸೇವೆ ಸಲ್ಲಿಸಿರುವ ಇವರು
ಬಿಜೆಪಿ ಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕರೂ ಆಗಿದ್ದಾರೆ.
ಅಪಾರ ಯುವ ಪಡೆಯನ್ನು ಹೊಂದಿರುವ ಇವರನ್ನು ಬಿಜೆಪಿ ಕೆಲವರ್ಷಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದು
ಇವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪಕ್ಷದ ವರಿಷ್ಠರಗಮನವನ್ನು ಸೆಳೆಯುತ್ತಿದ್ದಾರೆ.

ಇವರ ಬೆಂಬಲ ಕ್ಷೇತ್ರದಲ್ಲಿ ದಿನಕರ ಶೆಟ್ಟಿಯವರ ಗೆಲುವಿನ ಬಲ ಹೆಚ್ಚಿಸಲಿದೆ ಎನ್ನಲಾಗುತ್ತಿದೆ.