Home Local ನಾಮಪತ್ರ ಸಲ್ಲಿಸಿದ ಶಾರದಾ ಮೋಹನ ಶೆಟ್ಟಿ: ಅಪಾರ ಬೆಂಬಲಿಗರ ಉಪಸ್ಥಿತಿ.

ನಾಮಪತ್ರ ಸಲ್ಲಿಸಿದ ಶಾರದಾ ಮೋಹನ ಶೆಟ್ಟಿ: ಅಪಾರ ಬೆಂಬಲಿಗರ ಉಪಸ್ಥಿತಿ.

SHARE

ಕುಮಟಾ:ಇಂದು ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ,ದೇವರಹಕ್ಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ ಹಾಗೂ ನೆಲ್ಲಿಕೇರಿ ಶ್ರೀ ಮಹಾಸತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಸಂಖ್ಯಾತ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.

ಶಾಸಕರಾಗಿ ಒಂದು ಅವಧಿ ಪೂರೈಸಿದ್ದ ಅವರು ಇದೀಗ ಮತ್ತೆ ಚುನಾವಣಾ ಅಖಾಡಕ್ಕೆ ಇಳಿದಿದ್ದು ಅಪಾರ ಬೆಂಬಲಿಗರ ಬಲ ನನಗಿದೆ. ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ, ಶ್ರೀ ಜಗದೀಪ ತೆಂಗೇರಿ, ತಾರಾ ಗೌಡ,ಸುರೇಖಾ ವಿವೇಕರ, ಶ್ರೀ ರವಿಕುಮಾರ್ ಮೋಹನ್ ಶೆಟ್ಟಿ, ಜಗದೀಶ ಹರಿಕಂತ್ರ,ಮುಂತಾದವರು ಉಟಸ್ಥಿತರಿದ್ದರು.