Home Local ಶಿರಸಿಯಲ್ಲಿ ಹೆಚ್ಚಿದೆ ಶಶಿಯ ಪ್ರಭೆ: ಅಪಾರ ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸಿದ ಶಶಿಭೂಷಣ ಹೆಗಡೆ

ಶಿರಸಿಯಲ್ಲಿ ಹೆಚ್ಚಿದೆ ಶಶಿಯ ಪ್ರಭೆ: ಅಪಾರ ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸಿದ ಶಶಿಭೂಷಣ ಹೆಗಡೆ

SHARE

ಸಿದ್ದಾಪುರ: ಈ ಬಾರಿ ಮೂರನೆ ಪ್ರಯತ್ನಕ್ಕೆ ಕೈಹಾಕಿರುವ ರಾಮಕೃಷ್ಣ ಹೆಗಡೆ ಅಭಿಮಾನಿಗಳು, ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕಿನ ಜನತೆಯ ಮುಂದೆ `ಹೆಗಡೆ ವಂಶದ ಕುಡಿ’ಯನ್ನು ತಂದು ನಿಲ್ಲಿಸಿದ್ದಾರೆ. ರಾಮಕೃಷ್ಣ ಹೆಗಡೆ ಅವರ ಹೆಸರಿನ ಶ್ರೀರಕ್ಷೆಯೊಂದಿಗೆ, ಎಸ್. ಬಂಗಾರಪ್ಪ ಮತ್ತು ಕುಮಾರಸ್ವಾಮಿ ಅವರ ಹೆಸರಿನ ಬಲದೊಂದಿಗೆ ಚುನಾವಣಾ ಕಣಕ್ಕಿಳಿದಿರುವ ಶಶಿಭೂಷಣ ಹೆಗಡೆ ಇಂದು ನಾಮಪತ್ರ ಸಲ್ಲಿಸಿದರು.

ಸಹಸ್ರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಅವರು ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ೮ ಗಂಟೆಗೆ ಯಲ್ಲಾಪುರ ನಾಕಾದಲ್ಲಿ ಇರುವ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಪುತ್ಥಳಿಗೆ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಅವರು ಮಾಲಾರ್ಪಣೆ ಮಾಡಿ ಅಲ್ಲಿಂದ ಶಿರಸಿಯ ಮಹಾಗಣಪತಿ ದೇವಸ್ಥಾನಕ್ಕೆ 8.30 ಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಶಿರಸಿಯ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮುಖಾಂತರ ತೆರಳಿ, ಜಾತ್ಯತೀತ ಜನತಾದಳ ಶಿರಸಿ_ಸಿದ್ದಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ರಾಜ್ಯ ಯುವಜನತಾದಳದ ರಾಜ್ಯ ಅಧ್ಯಕ್ಷರು ಹಾಗೂ ಸೊರಬದ ಶಾಸಕರಾದ ಶ್ರೀ ಮಧು ಬಂಗಾರಪ್ಪ ಅವರು ಉಪಸ್ಥಿತರಿದ್ದರು, ಪಕ್ಷದ ಎಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು.