Home Important ವಿದ್ಯಾರ್ಥಿವಾಹಿನೀ ವಿರಾಮ – ವಿಚಾರ – ವಿಹಾರ (3) ಶಿಬಿರ

ವಿದ್ಯಾರ್ಥಿವಾಹಿನೀ ವಿರಾಮ – ವಿಚಾರ – ವಿಹಾರ (3) ಶಿಬಿರ

SHARE

ಹವ್ಯಕ ಮಹಾಮಂಡಲದ ವಿದ್ಯಾರ್ಥಿವಾಹಿನೀ ವಿಭಾಗದಿಂದ ಪ್ರತಿವರ್ಷ ಆಯೋಜಿಸಲಾಗುವ ವಿರಾಮ – ವಿಚಾರ – ವಿಹಾರ (3) ಶಿಬಿರವು 23-04-2018 ರಂದು ಬೆಳಿಗ್ಗೆ9:30 ಕ್ಕೆ ದೀಪಪ್ರಜ್ವಾಲನೆಯೊಂದಿಗೆ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು.

ಶ್ರೀ ಮಠದ ವಿದ್ಯಾ ವಿಭಾಗದ ಶ್ರೀಕಾರ್ಯದರ್ಶಿ ಶ್ರೀ ಪ್ರಮೋದ್ ಪಂಡಿತರು ಉದ್ಘಾಟನೆ ನೆರವೇರಿಸಿ, ದಿಕ್ಸೂಚಿ ಮಾತುಗಳ ಮೂಲಕ ಶಿಬಿರಕ್ಕೆ ಚಾಲನೆ ಪ್ರೇರಣೆ ನೀಡಿದರು.‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹವ್ಯಕ ಮಹಾಮಂಡಲದ ಅಧ್ಯಕ್ಷರು ಶ್ರೀಮತಿ ಈಶ್ವರಿ ಶ್ಯಾಮ ಭಟ್ ಬೇರ್ಕಡವು ಶಿಬಿರದ ಉದ್ದೇಶವನ್ನು ಪ್ರಸ್ತಾಪಿಸಿ, ಮಕ್ಕಳಿಗೆ ಶಿಬಿರದ ಸದುಪಯೋಗ ಪಡೆಯಲು ಕರೆಯಿತ್ತರು.

ಈ ಸಂದರ್ಭದಲ್ಲಿ ಶ್ರೀಭಾರತೀ ಗುರುಕುಲದ ಪ್ರಧಾನ ಆಚಾರ್ಯರಾದ ವಿದ್ವಾನ್ ಆಚಾರ ವಿಚಾರ ಗಜಾನನ ಭಟ್ಟರು , ಡಾ| ಗಣಪತಿ ಭಟ್ಟರು, ಶ್ರೀ ಶಾಮಭಟ್ ಬೇರ್ಕಡವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರದಲ್ಲಿ ಶ್ರೀ ಪ್ರಮೋದ್ ಪಂಡಿತರು ಶ್ರೀ ಮಠದ ಹಾಗೂ ಗುರುಪರಂಪರೆಯ ವಿಶೇಷತೆಯನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿದರು. 52 ಶಿಬಿರಾರ್ಥಿಗಳು (31ಹೆಣ್ಣು ಮಕ್ಕಳು ಹಾಗೂ 21 ಗಂಡು ಮಕ್ಕಳು) ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಹಾಮಂಡಲ, ಮಂಡಲ, ವಲಯಗಳ ವಿದ್ಯಾರ್ಥಿವಾಹಿನೀ ಪ್ರಧಾನರು ಶಿಬಿರ ಸಂಯೋಜಕರಾಗಿ ಭಾಗವಹಿಸುತ್ತಿದ್ದಾರೆ. ಎಸ್ ಜಿ ಭಟ್ ಕಬ್ಬಿನಗದ್ದೆ,(ಮಹಾಮಂಡಲ) ಗಣೇಶ.ಹೆಚ್.ಕೆ. (ರಾಮಚಂದ್ರಾಪುರ ಮಂಡಲ) ಸಂಧ್ಯಾ ಕಾನತ್ತೂರು (ಬೆಂಗಳೂರು ಉತ್ತರ ಮಂಡಲ) ಅಶ್ವಿನಿ ಅರವಿಂದ (ಬೆಂಗಳೂರು ದಕ್ಷಿಣ ಮಂಡಲ) ಕೇಶವಪ್ರಸಾದ ಎಡೆಕ್ಕಾನ (ಮುಳ್ಳೇರಿಯ ಮಂಡಲ) ಮಂಜುನಾಥ್ ಮೇಕಾರು (ಸಂಪೇಕಟ್ಟೆ ವಲಯ, ರಾಮಚಂದ್ರಾಪುರ ಮಂಡಲ) ಗೌರೀ ಪ್ರಭಾಕರ್ (ಸರ್ವಜ್ಞ ವಲಯ, ಬೆಂಗಳೂರು ಉತ್ತರ ಮಂಡಲ) ಇವರು ಮೊದಲನೇ ದಿನ ಭಾಗವಹಿಸಿರುತ್ತಾರೆ.

ಶಿಬಿರದ ಪೂರ್ಣಾವಧಿ ಕಾರ್ಯಕರ್ತರಾಗಿ ವಿಜಯಲಕ್ಷ್ಮಿ ಅಂಗಡಿ ಸಿದ್ದಾಪುರ ಮಂಡಲ, ಭಾನುಮತಿ ಸಾಗರ ಮಂಡಲ, ಕು. ದಿವ್ಯಾ ಮುಳ್ಳೇರಿಯ ಮಂಡಲ, ಚಿ.ಜಗದೀಶ, (ಹೊನ್ನಾವರ ಮಂಡಲ) ಶ್ರೀ ಮಹೇಶ ಕೃಷ್ಣ ತೇಜಸ್ವಿ (ನೀರ್ಚಾಲು ವಲಯ,ಮುಳ್ಳೇರಿಯ ಮಂಡಲ ಶಿಷ್ಯ ಮಾಧ್ಯಮ ಪ್ರಧಾನ), ಅಶ್ವಿನಿ ಅರವಿಂದ, ಕೇಶವ ಪ್ರಸಾದ ಎಡೆಕ್ಕಾನ, ಸಂಧ್ಯಾ ಕಾನತ್ತೂರು, ಶ್ರೀ ಭಾರತೀ ಗುರುಕುಲದ ಹಿರಿಯ ವಿದ್ಯಾರ್ಥಿಗಳಾದ ಚಿ. ಭರತ, ಚಿ. ಶ್ರೀಹರ್ಷ, ಚಿ. ಚಿರಂತ, ಚಿ. ರಾಜೇಶ, ಚಿ. ಆನಂದ, ಕು. ರಕ್ಷಿತಾ, ಕು. ವೆಂಕಿತಾ, ಕು. ಭೈರವೀ ಮೈತ್ರೇಯೀ ಗುರುಕುಲದ ವಿದ್ಯಾರ್ಥಿಗಳಾದ ಕು.ಸಿಂಚನಾ ಕಾನತ್ತೂರು ಕು.ಪಾರ್ವತಿ, ಶಿಬಿರದಲ್ಲಿ ಪೂರ್ಣಾವಧಿ ತೊಡಗಿಸಿಕೊಂಡಿದ್ದಾರೆ.