Home Local ಭಟ್ಕಳದಲ್ಲಿ ಸುನಿಲ್ ‌ನಾಯ್ಕ ನಾಮಪತ್ರ ಸಲ್ಲಿಕೆ: ಸಹಸ್ರಾರು ಜನರ ಬೆಂಬಲ ತೋರಿದ ಬಿಜೆಪಿ.

ಭಟ್ಕಳದಲ್ಲಿ ಸುನಿಲ್ ‌ನಾಯ್ಕ ನಾಮಪತ್ರ ಸಲ್ಲಿಕೆ: ಸಹಸ್ರಾರು ಜನರ ಬೆಂಬಲ ತೋರಿದ ಬಿಜೆಪಿ.

SHARE

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಒಟ್ಟು 18 ನಾಮಪತ್ರ ಸಲ್ಲಿಕೆಯಾಗಿವೆ. ಅದರಲ್ಲಿ ಭಟ್ಕಳದ ಸುನಿಲ್ ನಾಯ್ಕ ನಾಮಪತ್ರ ಸಲ್ಲಿಸಿ ಜನಾಕರ್ಷಣೆಯ ಕೇಂದ್ರವಾದರು.

ಅನಂತ ಕುಮಾರ ಹೆಗಡೆ ಜೊತೆ ತೆರಳಿದ ಸುನಿಲ್‌ ನಾಯ್ಕ ಅಪಾರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಬಲ ತೋರಿದರೆಂದೇ ಬಿಂಬಿಸಲಾಗಿದೆ.

ಭಟ್ಕಳದಲ್ಲಿ ಶಾಂತಿ ನೆಲೆಸಬೇಕು, ಶಾಂತಿ ನೆಲೆಸಲು ಬಿಜೆಪಿ ಆಯ್ಕೆಯಾಗಬೇಕೆಂದು ಅನಂತ್ ಕುಮಾರ ಹೆಗಡೆ ಅಭಿಪ್ರಾಯ ಪಟ್ಟರು . ಸುನಿಲ್‌ ನಾಯ್ಕ ಅವರನ್ನು ಬೆಂಬಲಿಸಿ ಎಂದು ಅವರು ಜನರನ್ನು ವಿನಂತಿಸಿದರು.