Home Local ಕುಮಟಾದಲ್ಲಿ ಘರ್ಜಿಸಲು ಸೋನಿ ಎಂಬ ಹುಲಿ ತಯಾರು : ನಾಮಪತ್ರ ಸಲ್ಲಿಸಿದ ಸೂರಜ್‌ ನಾಯ್ಕ ಸೋನಿ.

ಕುಮಟಾದಲ್ಲಿ ಘರ್ಜಿಸಲು ಸೋನಿ ಎಂಬ ಹುಲಿ ತಯಾರು : ನಾಮಪತ್ರ ಸಲ್ಲಿಸಿದ ಸೂರಜ್‌ ನಾಯ್ಕ ಸೋನಿ.

SHARE

ಕುಮಟಾ : ಸಾವಿರಾರು ಹಿಂದೂ ಕಾರ್ಯಕರ್ತರ ಸಮ್ಮುಖದಲ್ಲಿ ಹಿಂದೂ ಹುಲಿ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿರುವ ಸೂರಜ್ ನಾಯ್ಕ್ ಸೋನಿ ಅವರು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದರು.

ಬಿ.ಜೆ.ಪಿ ಟಿಕೇಟ್ ವಂಚಿತ ಸೋನಿ ಅವರು ಇಂದು ಬಂಡಾಯವಾಗಿ ಚುನಾವಣೆ ಸ್ಪರ್ಧಿಸುತಿದ್ದು ಇಂದು ಸಾವಿರಾರು ಕಾರ್ಯಕರ್ತರು ಅವರಿಗೆ ಬೆಂಬಲ ಸೂಚಿಸಿದರು.

ಕುಮಟಾ ನಗರದ ಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಹೊರಟ ಮೆರವಣಿಗೆ ನಗರದಾದ್ಯಂತ ಹಿಂದೂ ಪರ ಘೋಷಣೆ ಕೂಗುತ್ತಾ ಸಂಚರಿಸಿ ಉಪ ನೊಂದಾವಣಾ ಅಧಿಕಾರಿಯವರಿಗೆ ನಾಮಪತ್ರ ಸಲ್ಲಿಸಿದರು.

ಕೇಸರಿ ಶಲ್ಯ ತೊಟ್ಟ ಅಭಿಮಾನಿಗಳು ಶಲ್ಯ ಬೀಸಿ ಸೋನಿಯವರಿಗೆ ಬೆಂಬಲ ಸೂಚಿಸಿದರು. ಈಗ ಚುನಾವಣಾ ಕದನ ಬಿರುಸಾಗಿದ್ದು ಮತದಾರ ಯಾರಿಗೆ ಒಲಿಯುತ್ತಾನೆ ಎಂಬುದನ್ನು ಕಾದು ನೋಡಬೇಕಾಗಿದೆ.