Home Local ಶಾರದಾ ಶೆಟ್ಟಿಯವರ ಕಾರ್ಯ ಮೆಚ್ಚಿ ಕಾಂಗ್ರೆಸ್ ಸೇರಿದ ಯುವಪಡೆ: ಪಕ್ಷಕ್ಕೆ ಬರಮಾಡಿಕೊಂಡ ರವಿಕುಮಾರ ಶೆಟ್ಟಿ.

ಶಾರದಾ ಶೆಟ್ಟಿಯವರ ಕಾರ್ಯ ಮೆಚ್ಚಿ ಕಾಂಗ್ರೆಸ್ ಸೇರಿದ ಯುವಪಡೆ: ಪಕ್ಷಕ್ಕೆ ಬರಮಾಡಿಕೊಂಡ ರವಿಕುಮಾರ ಶೆಟ್ಟಿ.

SHARE

ಹೊನ್ನಾವರ: ಪಟ್ಟಣ ವ್ಯಾಪ್ತಿಯ ಯುವಕರು ಶಾಸಕಿ ಶಾರದಾ ಶೆಟ್ಟಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಶ್ರೀ ರವಿಕುಮಾರ್ ಮೋಹನ್ ಶೆಟ್ಟಿಯವರ ಸಮ್ಮುಖದಲ್ಲಿ, ಮುಖಂಡರಾದ ಶ್ರೀ ಗಣಪತಿ ಮೇಸ್ತ ಇವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಇಂದು ಹೊನ್ನಾವರ ತಾಲೂಕಿನ ಉದ್ಯಮನಗರದ ನಿವಾಸಿಗ ಯುವಕರು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈಗ ಯುವ ಮುಖಂಡ ರವಿಕುಮಾರ ಶೆಟ್ಟಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ ಎಲ್ಲರನ್ನೂ ಕಾಂಗ್ರೆಸ್ ಗೆ ಬರಮಾಡಿಕೊಂಡರು. ಪಕ್ಷದ ಸಂಘಟನೆ ಹಾಗೂ ಮುಂದಿನ ಚುನಾವಣಾ ಪ್ರಚಾರದಲ್ಲಿ ಈ ಯುವ ಪಡೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ ಎಂದು ವರದಿಯಾಗಿದೆ.