Home Local ನಿಶಾ ವಿನಾಯಕ ಪೈ-ರಸಾಯನ ವಿಜ್ಞಾನದಲ್ಲಿ ಸಾಧನೆ

ನಿಶಾ ವಿನಾಯಕ ಪೈ-ರಸಾಯನ ವಿಜ್ಞಾನದಲ್ಲಿ ಸಾಧನೆ

SHARE

ಕುಮಟಾ: ಇಲ್ಲಿಯ ಹಿರಿಯ ಸಮಾಜ ಸೇವಕ ವಿಠ್ಠಲ ರಾಘವೇಂದ್ರ ಪೈ ಮಾಡಗೇರಿ ಇವರ ಮೊಮ್ಮಗಳು ಹಾಗೂ ವಿದ್ಯಾಲಕ್ಷ್ಮೀ ಮತ್ತು ವಿನಾಯಕ ವಿಠ್ಠಲ ಪೈ ಅವರ ಮಗಳಾದ ಕುಮಾರಿ ನಿಶಾ ಪೈ ನೆಲ್ಲೇಕೇರಿ ಇವರು ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥ ಮಹಾವಿದ್ಯಾಯದ ಸ್ನಾತಕೋತ್ತರ ವಿಭಾಗದ ಎಂ.ಎಸ್ಸಿ., ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯ ಸಾಧನೆಗೈದು ಕೀರ್ತಿ ತಂದಿದ್ದಾರೆ.

ಇತ್ತೀಚೆಗೆ ಹೊನ್ನಾವರದ ಗೌಡ ಸಾರಸ್ವತ ಸಮಾಜದ ಯುವವಾಹಿನಿಯವರು ನಿಶಾ ಅವರನ್ನು ಸನ್ಮಾನಿಸಿದ್ದಾರೆ. ಬಹುಮುಖ ಪ್ರತಿಭೆಯ ನಿಶಾಳಿಗೆ ಶಾಂತಿಕಾ ಪರಮೇಶ್ವರಿ ದೇವಳದ ಮೊಕ್ತೇಶ್ವರ ಕೃಷ್ಣ ಬಾಬಾ ಪೈ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್.ಭಟ್ಟ ಅಭಿನಂದಿಸಿದ್ದಾರೆ.