Home Local ಕುಮಟಾದಲ್ಲಿ ರಾಹುಲ್ ರೋಡ್ ಶೋ ಯಶಸ್ವಿ: ಬಿಜೆಪಿ ವಿರುದ್ಧ ಗುಡುಗಿದ ಸಿದ್ಧರಾಮಯ್ಯ

ಕುಮಟಾದಲ್ಲಿ ರಾಹುಲ್ ರೋಡ್ ಶೋ ಯಶಸ್ವಿ: ಬಿಜೆಪಿ ವಿರುದ್ಧ ಗುಡುಗಿದ ಸಿದ್ಧರಾಮಯ್ಯ

SHARE

ಕುಮಟಾ: ತಾಲೂಕಿನಲ್ಲಿ ಕಾಂಗ್ರೆಸ್ ನಿಂದ ಹಮ್ಮಿಕೊಂಡಿದ್ದ ರೋಡ್ ಶೋ ಗೆ ಅಪೂರ್ವ ಸ್ಪಂದನೆ ವ್ಯಕ್ತವಾಯಿತು. ಕುಮಟಾದಲ್ಲಿ ನಡೆದ ರೋಡ್ ಶೋದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಿದ್ಧರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಭ್ರಷ್ಟಾಚಾರ ನಿಮೂಲನೆ ಮಾಡುತ್ತೇವೆ, ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ. ಜಮೆ ಮಾಡುತ್ತೇವೆ ಎಂದು ಮೋದಿ ಅಧಿಕಾರಕ್ಕೆ ಬರುವ ಪೂರ್ವ ಹೇಳಿದನ್ನು ರಾಹುಲ್ ನೆನಪಿಸಿದರು.  ಬಿಜೆಪಿ ಸರ್ಕಾರ ಸುಳ್ಳಿನ ಸರಕಾರ, ಜನತೆಗೆ ನುಡಿದಂತೆ ನಡೆಯದೆ ಮೋಸ ಮಾಡಿದೆ ಎಂದು ಆರೋಪಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆಯದೆ ಹೋದಲ್ಲೆಲ್ಲಾ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ಧರಾಮಯ್ಯ ನವರು ಕಾಂಗ್ರೆಸ್ ಜನತೆಗೆ ಸಾಲಮನ್ನಾ, ಬಾಲಕಿಯರಿಗೆ ಉಚಿತ ಶಿಕ್ಷಣ, ಉಚಿತ ಬಸ್ ಪಾಸ್ ವ್ಯವಸ್ಥೆ ಹಾಗೂ ಇನ್ನಿತರ ಪ್ರಮುಖ ಯೋಜನೆಗಳನ್ನು ರೂಪಿಸಿದೆ. ಬಿಜೆಪಿ ಐದು ವರ್ಷದಲ್ಲಿ ಏನು ಸಾಧನೆ ಮಾಡಿದೆ ಎಂದು ಗುಡುಗಿದರು. ಜೆಡಿಎಸ್ ಹಾಗೂ ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ ನೀವು ಜೆಡಿಎಸ್ ಗೆ ಮತ ನೀಡಿದರೂ ಅದು ಬಿಜೆಪಿಗೆ ನೀಡಿದಂತೆ ಎಂದ ಅವರು . ಶಾರದಾ ಶೆಟ್ಟಿಯವರಿಗೆ ಮತ ನೀಡಿ ಗೆಲ್ಲಿಸುವಂತೆ ಜನತೆಯಲ್ಲಿ ವಿನಂತಿ ಮಾಡಿದರು.


ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಎಲ್ಲ ಬಂಡಾಯವನ್ನು ಶಮನ ಮಾಡಲಾಗುವುದು ಎಂದರು.

ಕೆಪಿಸಿಸಿ ಅದ್ಯಕ್ಷ ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ, ವೇಣು ಗೋಪಾಲ, ಬಿ.ಕೆ.ಹರಿಪ್ರಸಾದ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ, ಮಹದೇವಪ್ಪ, ಆರ್.ವಿ.ದೇಶಪಾಂಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಯಂ ಠಾಕೂರ, ಪ್ರಶಾಂತ ದೇಶಪಾಂಡೆ. ಕೆಪಿಸಿಸಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ಸೇರಿದಂತೆ ರಾಷ್ಟ್ರ ಮತ್ತು ರಾಜ್ಯದ ಅನೇಕ ಹಿರಿಯ ನಾಯಕರುಗಳು ರೋಡ ಶೋ ನಲ್ಲಿ ಬಾಗವಹಿಸಿದ್ದರು. ಸ್ಥಳೀಯ ಪ್ರಮುಖರಾದ ಶಾರದಾ ಶೆಟ್ಟಿ, ರವಿಕುಮಾರ ಶೆಟ್ಟಿ,ಮಧುಸೂಧನ ನಾಯ್ಕ, ವಿ.ಎಲ್ ನಾಯ್ಕ ಹಾಗೂ ಇನ್ನಿತರರು ಇದ್ದರು.

ಕಾಂಗ್ರೆಸ್ ಅಭಿಮಾನಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಈ ಬಾರಿ ಕಾಂಗ್ರೆಸ್ ಗೆಲ್ಲುವುದೆಂಬ ರೀತಿಯಲ್ಲಿ ಜಯಘೋಷಗಳನ್ನು ಕೂಗುತ್ತಿರುವುದು ಕಂಡುಬಂತು.